ರಾಜಕೀಯ ಭವಿಷ್ಯ ನಿಜವಾಗಿದೆ: ಕೋಡಿಮಠ ಶ್ರೀ
ಮೈಸೂರು: ರಾಜ್ಯ ರಾಜಕೀಯದ ಸಂಬಂಧ ನಾನು ಹೇಳಿದ್ದ ಭವಿಷ್ಯ ನಿಜವಾಗಿದೆ ಎಂದು ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಮಂಗಳವಾರ ನಗರದ ಡಿ. ಬನುಮಯ್ಯ ರಸ್ತೆಯ ವೀರಭದ್ರಸ್ವಾಮಿ ಜನ್ಮದಿನೋತ್ಸವ ಹಾಗೂ ರಥೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸಾರ್ವಜನಿಕ ಭಾಷಣದಲ್ಲಿ ಈ ವಿಷಯ ತಿಳಿಸಿದರು.
ಅಂಬಲಿ ಹಳಸೀತು, ಕಂಬಳಿ ಹಾಸೀತು, ಕೈಲಾಸದಲ್ಲಿ ಗಂಟೆ ಬಾರಿಸೀತು. ಬಂಗಾರದ ಪಂಜರ ಭಾರವಾದೀತು, ಸ್ಫೋಟಕ ಸುದ್ದಿ ಬಂದೀತು. ಅಚ್ಚರಿಯ ಫಲಿತಾಂಶ ಬಂದೀತು. ಏಕ ಪಕ್ಷ ಅಧಿಕಾರಕ್ಕೆ ಬಂದರೂ ಸರ್ಕಾರ ರಚನೆ ಕಷ್ಟವಾಗುತ್ತದೆ. ಮುಂದೆ ಸರ್ಕಾರ ಅಸ್ಥಿರ ಎಂದ ಅವರು, ಮುಂದಿನ ವಿವರಣೆ ಕೊಡುವುದಿಲ್ಲ ಎಂದರು.