ವಿವಿ ಹಾಸ್ಟೆಲ್ನಲ್ಲಿ ಊಟದ ವ್ಯವಸ್ಥೆಗೆ ಆಗ್ರಹ
ಮೈಸೂರು: ಮೈಸೂರು ವಿವಿಯ ವಿವಿಧ ವಿದ್ಯಾರ್ಥಿನಿಲಯಗಳಲ್ಲಿ ತಕ್ಷಣ ಊಟದ ವ್ಯವಸ್ಥೆ ಆರಂಭಿಸಲು ಆಗ್ರಹಿಸಿ ಎಐಡಿವೈಒ ಮತ್ತು ಎಐಡಿಎಸ್ಒ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಕ್ರಾಫರ್ಡ್ ಭವನದ ಎದುರು ಮಂಗಳವಾರ ಪ್ರತಿಭಟಿಸಿದರು. ಪದವಿ ಕಾಲೇಜುಗಳು ಆರಂಭವಾಗಿ ತಿಂಗಳಾದರೂ ವಿದ್ಯಾರ್ಥಿನಿಲಯಗಳಲ್ಲಿ ಊಟದ ವ್ಯವಸ್ಥೆ ಆರಂಭಿಸಿಲ್ಲ.
ಮಹಾರಾಜ, ಯುವರಾಜ, ಗೌತಮ, ಅಂಬೇಡ್ಕರ್, ವಿಲೇಜ್ ಹಾಸ್ಟೆಲ್, ಸ್ನಾತಕೋತ್ತರ ಹಾಸ್ಟೆಲ್ಗಳಲ್ಲಿ 3 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಊಟದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ತಕ್ಷಣದಿಂದ ಊಟದ ವ್ಯವಸ್ಥೆ ಆರಂಭಿಸಬೇಕು. ವಿದ್ಯಾರ್ಥಿನಿಲಯಗಳ ಶುಲ್ಕ ಹೆಚ್ಚಳವನ್ನು ವಾಪಸ್ ಪಡೆಯಬೇಕು. ಸರ್ಕಾರದ ಕೋಟಾ ಪ್ರಕಾರ ಎಲ್ಲ ಹಾಸ್ಟೆಲ್ಗಳಲ್ಲಿ ಎಲ್ಲ ಜಾತಿ, ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಎಐಡಿವೈಒ ಮತ್ತು ಎಐಡಿಎಸ್ಒ ಮುಖಂಡರಾದ ಚಂದ್ರಶೇಖರ್, ರೂಪಾ, ಉಮಾದೇವಿ, ರವಿ ನೇತೃತ್ವ ವಹಿಸಿದ್ದರು.