ಶುಲ್ಕ ವಿನಾಯ್ತಿಗೆ ಅಕ್ಕಿ ಗಿರಣಿ ಮಾಲೀಕರ ಮನವಿ
ಪಿರಿಯಾಪಟ್ಟಣ: ಸಂಘದ ನೀತಿ- ನಿಯಮಗಳಿಗೆ ತಕ್ಕಂತೆ ಸಂಘದ ಸದಸ್ಯರು ಸಹಕರಿಸುವಂತೆ ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಎಚ್.ವಿ. ನಾಗಪ್ಪ ಮನವಿ ಮಾಡಿದರು. ಇಲ್ಲಿನ ಕಂಠಿ ತಮ್ಮಯ್ಯ ಸುಬ್ಬಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲೂಕು ಅಕ್ಕಿ ಗಿರಿಣಿ ಮಾಲೀಕರ ಸಂಘದ ಸಭೆಯಲ್ಲಿ ಮಾತನಾಡಿ, ಅಕ್ಕಿ ಗಿರಣಿ ಮಾಲೀಕರಿಗೆ ಸೆಸ್ಕ್ ವತಿಯಿಂದ ಮಾಸಿಕ ಶುಲ್ಕ ಕನಿಷ್ಠ 2,500 ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಸಂಘದ ಸದಸ್ಯರ ಒಡಗೂಡಿ ಸೆಸ್ಕ್ ಇಲಾಖಾ ಅಧಿಕಾರಿಗಳಿಗೆ ಕನಿಷ್ಠ ಶುಲ್ಕ ಮನ್ನಾ ಮಾಡುವಂತೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು.
ಸರ್ಕಾರದ ಕಾನೂನಿನಡಿಯಲ್ಲಿ ಸಂಘದ ಸದಸ್ಯರು ಕಾರ್ಯನಿರ್ವಹಿಸುವಂತೆ ಹಾಗೂ ಎಲ್ಲ ಅಕ್ಕಿ ಗಿರಣಿಗಳಲ್ಲಿ ಅಕ್ಕಿ ಗಿರಣಿ ಮಾಡಲು ಏಕರೂಪದ ಬೆಲೆ ಪಾಲಿಸುವಂತೆ ಹಾಗೂ ಪ್ರತಿ ತಿಂಗಳು ಸಂಘದ ಸದಸ್ಯರೆಲ್ಲರೂ ತಪ್ಪದೆ ಸಭೆಗೆ ಹಾಜರಾಗುವಂತೆ ಮನವಿ ಮಾಡಿದರು.
ಕಾರ್ಯದರ್ಶಿ ಕೆ.ಎನ್. ನಾಗರಾಜ್, ಅಕ್ಕಿ ಗಿರಣಿ ಮಾಲೀಕರಾದ ವೃಷಬೇಂದ್ರಪ್ಪ, ಪ್ರಕಾಶ್, ಭಾಸ್ಕರ್, ಕೆ.ಪಿ. ವೆಂಕಟೇಶ್, ರೇಣುಕ, ದಶರಥ, ಎ.ಎಂ. ಗುರುಮೂರ್ತಿ, ನಟರಾಜು, ಮಹದೇವ ಇದ್ದರು.