ಅಣೆಕಟ್ಟೆ ದುರಸ್ತಿಗೆ ಕ್ರಮ: ಹತ್ತು ದಿನದಲ್ಲಿ ನಾಲೆ ನೀರು
ಕ.ಪ್ರ.ವಾರ್ತೆ ಟಿ.ನರಸೀಪುರ ಆ. 14
ಅಣೆಕಟ್ಟೆ ದುರಸ್ತಿಗೊಳಿಸಿ 10 ದಿನದೊಳಗೆ ನಾಲೆಗೆ ನೀರು ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದರು.
ತಾಲೂಕಿನ ತಲಕಾಡಿನ ಮಾಧವಮಂತ್ರಿ ಅಣೆಕಟ್ಟೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಬುಧವಾರ ಪರಿಶೀಲಿಸಿ ಮಾತನಾಡಿ, ಅಧಿಕ ನೀರಿನ ಹರಿವಿನಿಂದ ಕಟ್ಟೆ ಒಡೆದಿದೆ.
ಈಗ ತ್ವರಿತ ಕಾಮಗಾರಿ ನಿರ್ವಹಣೆಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ. ಗ್ರೇಬಿಯನ್ ಬಾಕ್ಸ್‌ಗಳನ್ನು ಅಳವಡಿಸಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಕ್ರೇನ್‌ಗಳ ಬಳಕೆಗೆ ರಸ್ತೆ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ. ಕಾಮಗಾರಿ ಮುಗಿದ ಕೂಡಲೆ ನಾಲೆಗೆ ನೀರು ಪೂರೈಕೆ ಮಾಡಲಾಗುತ್ತದೆ ಎಂದರು.
ಎಸಿ ಬಸವರಾಜು, ಜಿಪಂ ಸಿಇಒ ಗೋಪಾಲ್, ತಾಪಂ ಇಒ ಸಿ. ವೆಂಕಟೇಶ್, ತಹಸೀಲ್ದಾರ್ ಅರುಣಪ್ರಭ, ಎಂಜಿನಿಯರ್ ನಾಗರಾಜು, ಜಿಪಂ ಎಇಇ ಪುರುಷೋತ್ತಮ್, ಬನ್ನೂರು ಕಾವೇರಿ ನೀರಾವರಿ ನಿಗಮದ ಎಇಇ ವಿನೋದ್‌ಕುಮಾರ್, ಕಂದಾಯಾಧಿಕಾರಿ ಆನಂದ ರಾವ್ ಇದ್ದರು.