ಕ್ರೀಡಾಕೂಟದಲ್ಲಿ ಹಾರನಹಳ್ಳಿ ಶಾಲಾ ವಿದ್ಯಾರ್ಥಿಗಳ ಉತ್ತಮ ಸಾಧನೆ
ಕ.ಪ್ರ.ವಾರ್ತೆ ಬೈಲುಕುಪ್ಪೆ ಆ. 14
ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಪಠ್ಯ ವಿಷಯದಲ್ಲಿ ಅಲ್ಲದೆ, ಕ್ರೀಡಾ ಚಟುವಟಿಕೆಗಳಲ್ಲೂ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲೂ ನಮ್ಮ ಮಕ್ಕಳು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರವೆಂದು ಶಾಲಾ ಮುಖ್ಯ ಶಿಕ್ಷಕ ಎಚ್.ಎ. ಮಲ್ಲೇಶ್ ಹೇಳಿದರು.
ಇಲ್ಲಿಗೆ ಸಮೀಪದ ಹಾರನಹಳ್ಳಿ ಎಚ್ಪಿಎಸ್ ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಪಂ ಸದಸ್ಯರಾದ ಎಚ್.ಜೆ. ಮಂಜುನಾಥ್, ಸುಂದ್ರಮ್ಮ, ನಾಗಾಚಾರ್, ಗ್ರಾಪಂ ಮಾಜಿ ಅಧ್ಯಕ್ಷ ನಿಂಗೇಗೌಡ, ಅಣ್ಣಯ್ಯಾಚಾರ್, ಮಾಜಿ ಸದಸ್ಯ ಎ.ಇ. ಕೃಷ್ಣೇಗೌಡ, ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷ ಯೋಗೇಶ್ಗೌಡ, ಎಚ್.ಪಿ.ಎಸ್. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಹೇಶ್, ಮುಖಂಡರಾದ ರೂಪ ಚನ್ನೇಗೌಡ, ಚಿಕ್ಕಣ್ಣಾಚಾರ್, ರಾಮೇಗೌಡ, ಗೋವಿಂದೇಗೌಡ, ಸಹ ಶಿಕ್ಷಕರಾದ ಕೆ.ಸಿ. ಸತೀಶ್, ಹೇಮಾವತಿ, ಮಂಜುನಾಥ್, ದಿವ್ಯ ಇದ್ದರು.