ನಂಜನಗೂಡಿನಲ್ಲಿ ರಾಘವೇಂದ್ರರ ಆರಾಧನೆ
ಕ.ಪ್ರ.ವಾರ್ತೆ ನಂಜನಗೂಡು ಆ. 14
ಇಲ್ಲಿನ ರಾಷ್ಟ್ರಪತಿ ರಸ್ತೆಯಲ್ಲಿರುವ ಮೂಲಮಠದ ರಾಘವೇಂದ್ರ ಸ್ವಾಮಿಗಳವರ ಪ್ರತೀಕ ಸನ್ನಿಧಾನದಲ್ಲಿ ಆ. 20 ರಿಂದ 23 ರವರೆಗೆ ರಾಘವೇಂದ್ರ ಸ್ವಾಮಿಗಳವರ 342ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಪ್ರತಿದಿನ ಬೆಳಗಿನ ಜಾವ 5 ರಿಂದ 5.30 ರವರೆಗೆ ಸುಪ್ರಭಾತ, ಬೆಳಗ್ಗೆ 7 ಕ್ಕೆ ಪಂಚಾಮೃತ ಅಭಿಷೇಕ, 8ಕ್ಕೆ ಗುರುರಾಜರಿಗೆ ಪಾದಪೂಜೆ, 10ಕ್ಕೆ ಪಂಡಿತರಿಂದ ಉಪನ್ಯಾಸ, 11ಕ್ಕೆ ಅರ್ಚನೆ ಹಾಗೂ ಕನಕಾಭಿಷೇಕ, ಮಧ್ಯಾಹ್ನ 12ಕ್ಕೆ ನೈವೇದ್ಯ, ಹಸ್ತೋದಕ,ಅಲಂಕಾರ, ತೀರ್ಥಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ಸ್ವಸ್ತಿವಾಚನ, ಮಹಾಮಂಗಳಾರತಿ ಹಾಗೂ ಶ್ರೇಯ- ಪ್ರಾರ್ಥನೆ.
ಆ. 20ರ ಸಂಜೆ ಧ್ವಜಾರೋಹಣ, ಗೋಪೂಜೆ, ಧಾನ್ಯಪೂಜೆ, 5.30ಕ್ಕೆ ಶ್ರೀರಂಗಪಟ್ಟಣ ಗೋಪೀ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್, ಸಂಜೆ 7 ಕ್ಕೆ ನಂಜನಗೂಡಿನ ನಟರಾಜ ನಾಟ್ಯಶಾಲೆಯ ರಮ್ಯಾ ಎಸ್. ರಾಘವೇಂದ್ರ ಅವರಿಂದ ಭರತನಾಟ್ಯ ಪ್ರದರ್ಶನ.
ಆ. 21, ರಾಘವೇಂದ್ರ ಗುರುಸಾರ್ವಭೌಮರ ಪೂರ್ವಾರಾಧನೆ, ಸಂಜೆ 5 ರಿಂದ ಬೆಂಗಳೂರಿನ ಡಾ.ಎನ್. ಸುರೇಶ್ ಅವರಿಂದ ದಾಸವಾಣಿ ಕಾರ್ಯಕ್ರಮ, ಸಂಜೆ 7 ಕ್ಕೆ ಮೈಸೂರಿನ ವಿದ್ವಾನ್ ಶ್ರೀನಾಥ್ ಅವರಿಂದ ಶಾಸ್ತ್ರೀಯ ಸಂಗೀತ.
ಆ. 22, ಗುರುಸಾರ್ವಭೌಮರ ಮಧ್ಯಾರಾಧನೆ, ಸಂಜೆ 5 ರಿಂದ 7 ರವರೆಗೆ ರೇಖಾ ಮೋಹನ್ ಮತ್ತು ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ, 7 ರಿಂದ 9 ರವರೆಗೆ ಮೈಸೂರಿನ ವಿದ್ವಾನ್ ಎ. ಚಂದನ್ಕುಮಾರ್ ಅವರಿಂದ ವೇಣುವಾದನ.
ಆ. 23, ಗುರುಸಾರ್ವಭೌಮರ ಉತ್ತರಾಧನೆ, ಬೆಳಗ್ಗೆ 9 ಕ್ಕೆ ರಾಜಬೀದಿಗಳಲ್ಲಿ ಮಹಾರಥೋತ್ಸವ, ಸಂಜೆ 5ಕ್ಕೆ ಬೆಂಗಳೂರಿನ ವಿದ್ವಾನ್ ವಿ. ಬಾಲಕೃಷ್ಣನ್ ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ 7 ಕ್ಕೆ ಆರ್. ಸೋಮರಾಜ ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ಆ. 24, ಸುಜ್ಞಾನೇಂದ್ರತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಸುಪ್ರಭಾತ, ಪಂಚಾಮೃತ ಅಭಿಷೇಕ, ಗುರುರಾಜರಿಗೆ ಪಾದಪೂಜೆ, ಪಂಡಿತರಿಂದ ಉಪನ್ಯಾಸ, ಅರ್ಚನೆ ಹಾಗೂ ಕನಕಾಭಿಷೇಕ, ಸಂಜೆ ಸ್ವಸ್ತಿವಾಚನ, ಮಹಾಮಂಗಳಾರತಿ, ಹಾಗೂ ಶ್ರೇಯ- ಪ್ರಾರ್ಥನೆ, ಸಂಜೆ 7ಕ್ಕೆ ಬೆಂಗಳೂರಿನ ಅನೂಷ ಶ್ರೀಧರ ಅವರಿಂದ ಭರತನಾಟ್ಯ ಇರುತ್ತದೆ.