ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಜೆಪಿ- ಕೆಜೆಪಿ ಒಂದಾಗಲು ಶ್ರಾವಣ ಶುಭಕಾಲ: ಸೋಮಣ್ಣ

Rashmi Kasaragodu
Updated On : 15 Aug 2013, 12:36 pm

ಮೈಸೂರು: ಶ್ರಾವಣ ಮಾಸದ ಶುಭ ವೇಳೆಯಲ್ಲಿ ಆಗಸ್ಟ್ ಅಂತ್ಯಕ್ಕೆ ಬಿಜೆಪಿ ಮತ್ತು ಕೆಜೆಪಿ ಒಂದಾಗುವ ಕುರಿತು ಪಕ್ಷದ ವರಿಷ್ಠರೆ ಶುಭ ಸೂಚನೆ ನೀಡಲಿದ್ದಾರೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಸ್ಥಳೀಯ ಸಂಸ್ಥೆಗಳ ಬಿಜೆಪಿ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಮತ್ತು ಕೆಜೆಪಿ ಒಂದೆ ನಾಣ್ಯದ ಎರಡು ಮುಖಗಳು. ವಿಧಾನ ಪರಿಷತ್ ಚುನಾವಣೆ ಮೂಲಕ ಈಗ ಮತ್ತೆ ಒಂದಾಗುತ್ತಿದ್ದೇವೆ. ಈ ಉಪ ಚುನಾವಣೆ ಫಲಿತಾಂಶದ ಬಳಿಕ ಅಂದರೆ, ಆ. 30 ರೊಳಗೆ ಬಿಜೆಪಿ ವರಿಷ್ಠರೆ ಕೆಜೆಪಿ ಮತ್ತು ಬಿಜೆಪಿ ಒಂದಾಗುವ ಬಗ್ಗೆ ಶುಭ ಸೂಚನೆ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಚಟುವಟಿಕೆ ಆರಂಭವಾಗಿದ್ದು, ಅದರ ನೇತೃತ್ವವನ್ನು ಡಿ.ವಿ. ಸದಾನಂದಗೌಡರೆ ವಹಿಸಿಕೊಂಡಿದ್ದಾರೆ. ಒಂಟಿ ಸಲಗದಷ್ಟು ಶಕ್ತಿ ಇರುವ ಬಿ.ಎಸ್. ಯಡಿಯೂರಪ್ಪ ಅವರು ಅನೇಕರಿಗೆ ರಾಜಕೀಯವಾಗಿ ಅಧಿಕಾರ ನೀಡಿದ್ದಾರೆ. ಅವರ ಋಣವನ್ನು ಮರೆಯಲಾಗದು ಎಂದು ಡಿ.ವಿ. ಸದಾನಂದಗೌಡರೆ ಹೇಳಿದ್ದಾರೆ. ಆದ್ದರಿಂದ ಈಗ ಕಾಲ ಪಕ್ವವಾಗಿದೆ ಎಂದರು. ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಮಾತನಾಡಿ, ಈಗ ಮಾಡಿಕೊಳ್ಳುತ್ತಿರುವ ಹೊಂದಾಣಿಕೆ ಆರು ತಿಂಗಳ ಹಿಂದೆಯೆ ಆಗಿದ್ದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement