ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಶ್ವನಾಥ್ ವಿರುದ್ಧ ಹೇಳಿಕೆ ನಿಲ್ಲಿಸುವಂತೆ ಸಾರಾಗೆ ಆಗ್ರಹ

Rashmi Kasaragodu
Updated On : 15 Aug 2013, 12:34 pm

ಕೆ.ಆರ್. ನಗರ: ಸಂಸದ ಎಚ್. ವಿಶ್ವನಾಥ್ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ತಾಲೂಕು ಕಾಂಗ್ರೆಸ್ ಸಮಿತಿ ಹಿಂದಳಿದ ವರ್ಗಗಳ ವಿಭಾಗದ ಉಸ್ತುವಾರಿ ಅಧ್ಯಕ್ಷ ಯೋಗೇಶ್ ಶಾಸಕ ಸಾ.ರಾ. ಮಹೇಶ್‌ಗೆ ಆಗ್ರಹಿಸಿದ್ದಾರೆ. ವಿಶ್ವನಾಥ್ ನಿರುದ್ಯೋಗಸ್ಥರಲ್ಲ. ಅವರ ಉದ್ಯೋಗವೇ ರಾಜಕೀಯ. ಅವರನ್ನು ಕೆ.ಆರ್. ನಗರ ಜನತೆ ಸಹಾಯ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ. ನಿಮ್ಮ ತರಹ ಬೇರೆ ಉದ್ಯೋಗದಲ್ಲಿ ಸಂಪಾದಿಸಿರುವ ಹಣವನ್ನು ರಾಜಕೀಯಕ್ಕೆ ತಂದು ಹಾಕುವುದಿಲ್ಲ. ಅವರು ಚುನಾವಣೆಗೆ ನಿಲ್ಲುವಾಗ ಆಸ್ತಿ ಬಗ್ಗೆ ಅಫಿಡವಿಟ್ ಸಲ್ಲಿಸುತ್ತಾರೆ. ಹಾಗಿದ್ದರೂ ಅವರ ಆಸ್ತಿ ಎಷ್ಟಿದೆ ಎಂಬುದನ್ನು ತಾವೇ ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement