ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶ್ರೀ ಪದ್ಧತಿ ಬತ್ತ ಬೇಸಾಯ ನಾಟಿ ಕುರಿತು ಪ್ರಾತ್ಯಕ್ಷಿಕೆ

Rashmi Kasaragodu
Updated On : 15 Aug 2013, 12:34 pm

ಕ.ಪ್ರ.ವಾರ್ತೆ  ಎಚ್.ಡಿ.ಕೋಟೆ  ಆ. 14
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರಗೂರು ವಲಯದ ಬಿಡುಗಲು ಗ್ರಾಮದಲ್ಲಿ ಶ್ರೀ ಪದ್ಧತಿಯಡಿ ಬತ್ತ ಬೇಸಾಯ ನಾಟಿ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಪಡುವಲ ಮಠ ಬಿಡುಗಲು ಮಹದೇವ ಸ್ವಾಮೀಜಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಶ್ರೀ ಪದ್ಧತಿಯನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ, ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದು ಎಂದು ಹೇಳಿದರು.
ಯೋಜನಾಧಿಕಾರಿಗಳಾದ ಉಮರಬ್ಬ ಮಾತನಾಡಿದರು.
ಸರಗೂರು ವಲಯದ ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ್ ಇಲಾಖಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಿಡುಗಲಿನ ಪ್ರಗತಿಪರ ರೈತರಾದ ನಂಜುಂಡಸ್ವಾಮಿ ಶ್ರೀ ಪದ್ಧತಿ ಬೇಸಾಯ ವಿಧಾನ, ನಾಟಿಯ ರೀತಿ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಯೋಜನೆ ಕೃಷಿ ಮೇಲ್ವಿಚಾರಕರಾದ ಲಿಂಗಾರೆಡ್ಡಿ ಮತ್ತು ಹೈನುಗಾರಿಕಾ ಮೇಲ್ವಿಚಾರಕರಾದ ಸದಾಶಿವನಾಯಕ್ ನಡೆಸಿಕೊಟ್ಟರು. ತಾಲೂಕಿನ ಎಲ್ಲ ವಲಯದ ಮೇಲ್ವಿಚಾರಕರು ಮತ್ತು ಒಕ್ಕೂಟದ ಅಧ್ಯಕ್ಷರು, ಎಲ್ಲಾ ಸೇವಾ ಪ್ರತಿನಿಧಿಗಳು ತರಬೇತಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement