ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಸ್ವಿಇಐ ಶಿಕ್ಷಣ ಸಂಸ್ಥೆಯಲ್ಲಿ ಆಚರಣೆ

Rashmi Kasaragodu
Updated On : 16 Aug 2013, 12:43 pm

ಮೈಸೂರು: ಶಿಕ್ಷಣದ ಸದುಪಯೋಗವನ್ನು ನಾವೆಲ್ಲರೂ ಪಡೆಯಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು. ನಗರದ ಎಸ್ವಿಇಐ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಭಾರತ ಒಂದು ಕುಟುಂಬ ಇದ್ದಂತೆ. ನಾವೆಲ್ಲರೂ ಒಟ್ಟಾಗಿ ಜೀವಿಸಬೇಕು. ಶಿಕ್ಷಣ ಸಂಸ್ಥೆಗಳು ನೀಡುವ ಉತ್ತಮ ಶಿಕ್ಷಣವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವೆಲ್ಲರೂ ಕಂಕಣಬದ್ಧರಾಗಿರಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ. ಶಿವಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ದೇಶದ ಅಮೂಲ್ಯ ಆಸ್ತಿ ಇದ್ದಂತೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಏನಾದರೂ ಸಾಧಿಸಬೇಕಿದ್ದರೆ ಅದು ಕೇವಲ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದರು. ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ ಎನ್. ಅಶ್ವಿನಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ 36 ಸಾವಿರ ವಿದ್ಯಾರ್ಥಿವೇತನ ನೀಡಲಾಯಿತು. ಸಂಸ್ಥೆ ಅಧ್ಯಕ್ಷ ಎಂ.ಕೆ. ಪೋತರಾಜು, ಉಪಾಧ್ಯಕ್ಷ ಕೆ.ಎಂ. ರಾಜಶೇಖರ್, ಖಜಾಂಚಿ ಟಿ. ಪ್ರಭಾಕರ್ ಶೆಟ್ಟಿ, ಮುಖ್ಯ ಆಡಳಿತಾಧಿಕಾರಿ ಪುಟ್ಟಸ್ವಾಮಿಗೌಡ, ನಿರ್ದೇಶಕಿ ಶೋಭಾ ರಾಜಶೇಖರ್, ಆಡಳಿತ ಮಂಡಳಿ ಸದಸ್ಯರು ಇದ್ದರು.
ನಾಳೆ ಡಾ. ರಾಜ್ ನೆನಪಿನೋತ್ಸವ
ಮೈಸೂರು: ಡಾ. ರಾಜ್ಕುಮಾರ್ ಮತ್ತು ಡಾ. ಪಿ.ಬಿ. ಶ್ರೀನಿವಾಸ್ ಶರೀರ ಮತ್ತು ಶಾರೀರಗಳ ಸಮ್ಮಿಲನದ ನೆನಪಿನೋತ್ಸವ ಕಾರ್ಯಕ್ರಮ ಆ. 17ರ ಸಂಜೆ 5ಕ್ಕೆ ಕಲಾಮಂದಿರದಲ್ಲಿ ನಡೆಯಲಿದೆ. ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಕಾರ್ಯಕ್ರಮ ಉದ್ಘಾಟಿಸುವರು. ಚಲನಚಿತ್ರ ನಟಿ ಡಾ. ಜಯಮಾಲ ಅಧ್ಯಕ್ಷತೆ ವಹಿಸುವರು. ನಟ ವಿಜಯರಾಘವೇಂದ್ರ ವಿಶೇಷ ಅತಿಥಿಯಾಗಿ ಆಗಮಿಸುವರು. ನಿರ್ಮಾಪಕ ಭಗವಾನ್, ಹಿರಿಯ ಕಲಾವಿದ ಎಂ.ಎಸ್. ಉಮೇಶ್, ಸದಾಶಿವ ಬ್ರಹ್ಮಾವರ್, ಬಿ. ರೇಣುಕಾ ಪ್ರಸಾದ್, ಆರ್.ಸಿ. ಕಲಾ, ಬಿ. ಜಯಮ್ಮ, ಬಿ. ಮಲ್ಲೇಶ್ ಅವರನ್ನು ಅಭಿನಂದಿಸಲಾಗುವುದು. ಪತ್ರಿಕೋದ್ಯಮಿ ರಾಜಶೇಖರ ಕೋಟಿ, ನಿರ್ಮಾಪಕರಾದ ಎಸ್.ಎ. ಚೆನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್, ಅಮೋಘ ವಾಹಿನಿ ಮುಖ್ಯಸ್ಥ ಬಿಳಿಗಿರಿ ರಂಗನಾಥ್, ಡಾ. ಮನ್ಸೂರ್ ಅಹಮದ್, ತಬಲನಾಣಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement