ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿ'
ಮೈಸೂರು: ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಯುವಜನತೆ ಮುಂದಾಗಬೇಕು ಎಂದು ವಿಜ್ಞಾನಿ ಡಾ. ಡಿ.ವಿ. ಗೋಪಿನಾಥ್ ಹೇಳಿದರು.
ಶಾರದಾ ವಿಲಾಸ ವಿದ್ಯಾಸಂಸ್ಥೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ 67 ನೇ ಸ್ವಾಂತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ವರ್ಷದಿಂದ ವರ್ಷಕ್ಕೆ ಫಲಿತಾಂಶ ಮತ್ತು ಪ್ರವೇಶಾತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಹೊಸ ಕೋರ್ಸ್ಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಡಾ. ಡಿ.ವಿ. ಗೋಪಿನಾಥ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಕಳೆದ 30ಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಹಾಗೂ ಪತ್ರಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್. ರವಿಶಂಕರ್, ಆಡಳಿತ ಮಂಡಳಿ ಸದಸ್ಯರಾದ ಆರ್.ಎಸ್. ಮೋಹನಮೂರ್ತಿ, ಎಸ್. ನಾಗರಾಜ್, ಸುಂದರಮೂರ್ತಿ, ಎಚ್.ಕೆ. ಶ್ರೀನಾಥ್ ಹಾಗೂ ಎಂ.ಬಿ. ಡೋಂಗ್ರೆ ಇದ್ದರು. ಡಾ. ಆರ್. ನಾಗಭೂಷಣ ಸ್ವಾಗತಿಸಿದರು. ಡಾ. ಎಚ್.ಎನ್. ವಿಶ್ವನಾಥ್, ವೆಂಕಟರಮಣ ಭಟ್ ಹಾಗೂ ನಿರೂಪಿಸಿದರು. ಡಾ. ಹನುಮಂತಚಾರ್ ಜೋಷಿ ವಂದಿಸಿದರು.