ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಮಗ್ರ ಅಭಿವೃದ್ಧಿಯಾದರೆ ಸ್ವಾತಂತ್ರ್ಯಕ್ಕೆ ಅರ್ಥ'

Rashmi Kasaragodu
Updated On : 16 Aug 2013, 12:44 pm

ಕ.ಪ್ರ.ವಾರ್ತೆ   ಹುಣಸೂರು   ಆ. 15
ನಮ್ಮ ದೇಶ ಎಲ್ಲಾ ರಂಗದಲ್ಲಿಯೂ ಸಮಗ್ರ ಅಭಿವೃದ್ಧಿ ಹೊಂದಿದಾಗ ಮಾತ್ರ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹನೀಯರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಉಪ ವಿಭಾಗಾಧಿಕಾರಿ ವಿನೋತ್ಪ್ರಿಯಾ ಅಭಿಪ್ರಾಯಪಟ್ಟರು.
ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಗುರುವಾರ ಆಯೋಜಿಸಿದ್ದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವದಾನ ಮಾಡಿದ ಮಹಾನೀಯರನ್ನು ಸ್ಮರಿಸಬೇಕು. ಸ್ವಾತಂತ್ರ್ಯ ಬಂದು 67 ವರ್ಷಗಳು ಕಳೆದರೂ ಇಂದಿಗೂ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸದಿರುವುದು ವಿಷಾದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಆರ್. ಗೋಕುಲ್ ಮಾತನಾಡಿ, ಸಾರ್ವಭೌಮ ಗಣರಾಜ್ಯವಾದ ಭಾರತದಲ್ಲಿ ನಾವು ಜಾತ್ಯಾತೀತವಾಗಿ ಏಕತೆಯಿಂದ ಸಮಬಾಳು ನಡೆಸುತ್ತಿದ್ದೇವೆ. ಸಮಾಜವಾದಿ ನೀತಿ, ಪ್ರಜಾಸತ್ತಾತ್ಮಕ ಆಡಳಿತ, ನಿಷ್ಪಕ್ಷಪಾತ ನ್ಯಾಯಾಂಗ, ಸರ್ವಧರ್ಮಗಳ ಆರಾಧನೆ ಹಾಗೂ ಭ್ರಾತೃತ್ವದಿಂದ ಬಾಳುವ ಅವಕಾಶ ಸಂವಿಧಾನ ನಮಗೆ ನೀಡಿದ್ದರೂ ದೇಶದ ಅಖಂಡತೆ ಕಾಪಾಡುವ ಅಗತ್ಯವಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಪಟ್ಟಣದ ಟ್ಯಾಲೆಂಟ್ ವಿದ್ಯಾಸಂಸ್ಥೆ ನಡೆಸಿಕೊಟ್ಟ ಗೋಕುಲಾಷ್ಟಮಿ ಪ್ರಯುಕ್ತ ನಡೆಯುವ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ರಾಧಾಕೃಷ್ಣರ ಮೋಹಕ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಟ್ಟಣದ ಮಹಿಳಾ ಸಮುಖ್ಯಾದ ಮಹಿಳಾ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿಯರು ಪೂಜಾ ಕುಣಿತ ನಡೆಸಿಕೊಟ್ಟರು. ರೋಟರಿ ವಿದ್ಯಾಸಂಸ್ಥೆ, ಸಂತ ಜೋಸೆಫರ ಶಾಲೆ, ಶಾಸ್ತ್ರೀ ವಿದ್ಯಾಸಂಸ್ಥೆ, ನ್ಯೂ ಕೇಂಬ್ರಿಡ್ಜ್ ಶಾಲೆಗಳು ನೀಡಿದ ದೇಶಭಕ್ತಿ ಸಮೂಹ ನೃತ್ಯಗಳು ಕಣ್ಮನ ಸೆಳೆಯಿತು.
ತಹಸೀಲ್ದಾರ್ ಬಿ.ಸಿ. ಶಿವಾನಂದಮೂರ್ತಿ, ತಾಪಂ ಇಒ ಮಹದೇವಸ್ವಾಮಿ ಮಾತನಾಡಿದರು. ಧ್ವಜಾರೋಹಣದ ಬಳಿಕ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಡಿವೈಎಸ್ಪಿ ಮುದ್ದುಮಹದೇವಯ್ಯ, ವೃತ್ತ ನಿರೀಕ್ಷಕ ಗಜೇಂದ್ರ ಪ್ರಸಾದ್, ಬಿಇಒ ರಾಜಶೇಖರ್, ಪುರಸಭಾ ಮುಖ್ಯಾಧಿಕಾರಿ ಹರೀಶ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎನ್.ಎಸ್. ಚಂದ್ರಶೇಖರ್, ಜಯರಾಂ, ಪಿ.ಆರ್. ರಾಚಪ್ಪ, ಸುಬ್ಬುರಾವ್, ನಾರಾಯಣ ರೈ, ಜಿಪಂ ಸದಸ್ಯ ಸಿ.ಟಿ. ರಾಜಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement