ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಾತಂತ್ರ್ಯ ಸಂಭ್ರಮ ನೋಡಲ್ಲಿ....

Rashmi Kasaragodu
Updated On : 16 Aug 2013, 12:43 pm

ಕ.ಪ್ರ.ವಾರ್ತೆ   ಕೆ.ಆರ್. ನಗರ   ಆ. 15
ಭಾರತವನ್ನು ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟಲು ಪ್ರತಿಯೊಬ್ಬರು ಕಂಕಣಬದ್ಧರಾಗಿ ಸದಾ ದುಡಿಯಬೇಕು ಎಂದು ತಹಸೀಲ್ದಾರ್ ಬಿ.ಎನ್. ವೀಣಾ ಕುಮಾರ್ ಹೇಳಿದರು.
ಇಲ್ಲಿನ ಪುರಸಭಾ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಭಕ್ತಿ ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು.
ನಿರಂತರವಾಗಿ ದೇಶಪ್ರೇಮ ಮತ್ತು ಕಾಯಕ ನಿಷ್ಠೆ ಬೆಳೆಸಿಕೊಂಡು ಹಿರಿಯರ ಮಾರ್ಗದರ್ಶನ ಪಾಲಿಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರಾದ ವಿ. ಲಕ್ಕಪ್ಪ, ಸತ್ಯಮೂರ್ತಿ, ಸಿದ್ದಲಿಂಗಶೆಟ್ಟಿ ಅವರನ್ನು ತಾಲೂಕು ನಾಡಹಬ್ಬಗಳ ಸಮಿತಿ ವತಿಯಿಂದ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಇಲ್ಲಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯಧುಗಿರೀಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಬಸವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ಶಿವಪ್ರಸಾದ್, ಬಿಇಒ ಎಸ್.ಟಿ. ಜವರೇಗೌಡ, ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ, ಸಿಡಿಪಿಒ ಸದಾಶಿವಪ್ಪ, ಶಿರಸ್ತೇದಾರ ಗುರುಪ್ರಸಾದ್, ರಾಂಪ್ರಸಾದ್, ಅಬಕಾರಿ ನಿರೀಕ್ಷಕ ಮೋಹನಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಇದ್ದರು.
ನಡೆಯದ  ಮೆರವಣಿಗೆ: ಪಟ್ಟಣದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ದಿನದಂದು ಪ್ರತಿವರ್ಷ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೆರವಣಿಗೆ ನಡೆಯಲಿಲ್ಲ.
ಎಪಿಎಂಸಿ:  ಇಲ್ಲಿನ ಎಪಿಎಂಸಿ ಕಚೇರಿಯ ಆವರಣದಲ್ಲಿ 67ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅಧ್ಯಕ್ಷ ಎಂ. ರಮೇಶ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ತೋಟಪ್ಪ ನಾಯಕ, ನಿರ್ದೇಶಕರಾದ ಎಸ್. ಸಿದ್ದೇಗೌಡ, ಶಿವಕುಮಾರ್, ಪ್ರಶಾಂತ್, ವ್ಯವಸ್ಥಾಪಕ ಬಸವರಾಜು ಇದ್ದರು.
ಲಯನ್ಸ್ ಶಾಲೆ: ಇಲ್ಲಿನ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರತಿಭಾವಂತ ವಿದ್ಯಾರ್ಥಿನಿ ಡಿ.ಆರ್. ಪಲ್ಲವಿಗೆ ನಗದು ಬಹುಮಾನ ನೀಡಿ  ಅಭಿನಂದಿಸಿತು.
ಸಂಸ್ಥೆಯ ಅಧ್ಯಕ್ಷ ಬುದ್ದಿಸಾಗರ್, ಕಾರ್ಯದರ್ಶಿ ಕೆ.ಸಿ. ಲೋಕೇಶ್, ಖಜಾಂಚಿ ಮಹದೇವಯ್ಯ, ಕೆ.ಆರ್. ಸತ್ಯಕುಮಾರ್, ಮುಖ್ಯ ಶಿಕ್ಷಕರಾದ ರಮೇಶ್, ಲೋಕೇಶ್, ನಂದೀಶಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement