ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ ಗೆಲವಿಗೆ ಶ್ರಮಿಸಿ: ವಿಶ್ವನಾಥ್

Rashmi Kasaragodu
Updated On : 17 Aug 2013, 12:48 pm

ಕ.ಪ್ರ. ವಾರ್ತ್ಣೆ ಕೆ.ಆರ್. ನಗರ್ಣ ಆ. 16
ಲೋಕಸಭೆ ಮತ್ತು ವಿಧಾನ ಪರಿಷತ್ ಎರಡು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲು ಮುಖಂಡರು ಮತ್ತು ಕಾರ್ಯಕರ್ತರು ಗಂಭೀರವಾಗಿ ಕೆಲಸ ಮಾಡಬೇಕು ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಗುರುವಾರ ನಡೆದ ಚುನಾವಣಾ ಪೂರ್ವ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸದಾ ಜನಪರ ಹಿಂದುಳಿದವರ ಪರ ಎಂಬುದಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಜಾರಿ ಗೊಳಿಸಿದ ಅನ್ನಭಾಗ್ಯ, ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 4 ಪ್ರೋತ್ಸಾಹಧನ ನೀಡಿದ್ದೆ ಸಾಕ್ಷಿ ಎಂದು ತಿಳಿಸಿದರು.
ವಸತಿ ನಿರ್ಮಾಣದ ಪ್ರೋತ್ಸಾಹಧನವನ್ನು 1.20 ಲಕ್ಷಕ್ಕೆ ಏರಿಸಿದ್ದು, ಕ್ಷೀರ ಭಾಗ್ಯದಂತಹ ಉತ್ತಮ ಯೋಜನೆ ಜಾರಿಗೆ ತಂದಿದ್ದು, ಕಾಂಗ್ರೆಸ್ ಜನಪರ ಆಡಳಿತಕ್ಕೆ ಉದಾಹರಣೆ. ಲೋಕಸಭಾ ಅಧಿವೇಶನಕ್ಕೆ ಬಿಜೆಪಿಯವರು ಅಡ್ಡಿಪಡಿಸುತ್ತಿರುವುದು ಆಹಾರ ಭದ್ರತಾ ಮಸೂದೆ ಜಾರಿಗೆ ಬಂದು ದೇಶದ ಜನತೆ ಕಾಂಗ್ರೆಸ್ ಪರ ವಾಲುತ್ತಾರೆ ಎಂಬ ಭಯದಿಂದ ಎಂದು ಟೀಕಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಸೋಲಲು ನಮ್ಮ ಸೋಮಾರಿತನವೆ ಕಾರಣ. ಈ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಉತ್ಸಾಹದಿಂದ ಕೆಲಸ ಮಾಡೋಣ. ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಮತದಾರರು ಸಂಸತ್ ಚುನಾವಣೆಯಲ್ಲಿ ಸದಾ ಕಾಂಗ್ರೆಸ್ ಪರ ಇರುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಅರಕಲಗೂಡು ಶಾಸಕ ಎ. ಮಂಜು ಮಾತನಾಡಿ, ಉಪ ಚುನಾವಣೆ ಪಕ್ಷಕ್ಕೆ ಅತ್ಯಂತ ಪ್ರಮುಖವಾಗಿದ್ದು, ಕಾರ್ಯಕರ್ತರು ಮತದಾರರಿಗೆ ಪಕ್ಷದ ಸಾಧನೆಗಳನ್ನು ಮನವರಿಕೆ ಮಾಡಿ ಮತಯಾಚಿಸಿ ಗೆಲವಿಗೆ ದುಡಿಯಿರಿ ಎಂದು ಮನವಿ ಮಾಡಿದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಹರ್ಷದ್, ವಿಧಾನ ಪರಿಷತ್ ಅಭ್ಯರ್ಥಿ ಆರ್. ಧರ್ಮಸೇನ, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಮಲ್ಲಿಗೆ ವೀರೇಶ್ ಮಾತನಾಡಿದರು.  ಜಿಪಂ ಸದಸ್ಯ ರಾಜಯ್ಯ, ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಚಿತ್ರ ನಿರ್ಮಾಪಕ ಎಸ್.ಎ. ಚಿನ್ನೇಗೌಡ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಸಿದ್ದೇಗೌಡ, ಮೂಳೆತಜ್ಞ ಡಾ. ಮೆಹಬೂಬ್ಖಾನ್, ಮಾಜಿ ಸದಸ್ಯರಾದ ಡಿ. ರವಿಶಂಕರ್, ಎಚ್.ಎಸ್. ದೇವರಾಜು, ಮಾರ್ಷಹಳ್ಳಿ ಶಿವರಾಂ, ಕಾಂಗ್ರೆಸ್ ಮುಖಂಡರಾದ ಅಮಿತ್ ವಿ. ದೇವರಹಟ್ಟಿ, ಅನುರಾಧ ಮಹದೇವ್, ಸಿ.ಪಿ. ರಮೇಶಕುಮಾರ್, ಅಚ್ಚುತಾನಂದ, ಪ್ರಕಾಶ್, ನಾಗೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಲ್. ರಾಜಶೇಖರ, ಎಸ್.ಪಿ. ಆನಂದ, ವಕ್ತಾರ ಸೈಯದ್ ಜಾಬೀರ್, ವೀರಶೈವ ಮುಖಂಡ ಕರ್ತಾಳು ನಟಬುದ್ದಿ, ಯತೀಶ್, ಎಪಿಎಂಸಿ ಮಾಜಿ ನಿರ್ದೇಶಕ ಶೇಖರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement