ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಾಷ್ಟ್ರಭಕ್ತಿಯ ಜ್ಯೋತಿ ಆರದಂತೆ ನೋಡಿಕೊಳ್ಳಿ

Rashmi Kasaragodu
Updated On : 17 Aug 2013, 12:48 pm

ಕ.ಪ್ರ. ವಾರ್ತೆ, ಬಿಳಿಕೆರೆ, ಆ.15
ಪ್ರತಿಯೊಬ್ಬ ಮನುಷ್ಯ ರಾಷ್ಟ್ರಭಕ್ತಿಯ ಜ್ಯೋತಿಯನ್ನು ಎದೆಯಲ್ಲಿ ಆರದಂತೆ ಉಳಿಸಿಕೊಳ್ಳುವುದು ಮುಖ್ಯ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಎಂ. ರಾಮದಾಸು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್ಎಸ್ಎಸ್ ವೇದಿಕೆ ಗುರುವಾರ ಆಯೋಜಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಗೋಡೆ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ರಾಷ್ಟ್ರಪ್ರೇಮವೆಂಬುದು ಪರಮ ಪವಿತ್ರ ಸಂಗತಿಯಾಗಿದೆ. ಹಾಗಾಗಿ ನಮ್ಮ ದಿನಬದುಕಿನ ನಡುವೆ ಕಾಣುವ ಸಂಕುಚಿತ ಭಾವನೆಗಳನ್ನು ಮರೆತು ದೇಶದ ವಿಷಯದಲ್ಲಿ ಒಂದಾಗಬೇಕು ಎಂದು ತಿಳಿಸಿದರು.
ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಗಣೇಶ, ಭಾರತದ ಸ್ವಾತಂತ್ರ್ಯ ಹಾಗೂ ಸಂಸ್ಕೃತಿ ವೈವಿಧ್ಯ ಕುರಿತು ಮಾತನಾಡಿದರು. ಸಾಂಸ್ಕೃತಿಕ ವೇದಿಕೆಯ ಪಿ.ಇ. ಇಂದಿರಾ, ಕ್ರೀಡಾ ವಿಭಾಗದ ಪಶುಪತಿ ಹಾಗೂ ಎನ್ಎಸ್ಎಸ್ ವೇದಿಕೆ ಸದಸ್ಯರು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.
ಎಂ. ಯೋಗಾವತಿ ಸ್ವಾಗತಿಸಿದರು. ಇಂದಿರಾ ವಂದಿಸಿದರು. ಚೇತನ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement