ಸಾರ್ವಜನಿಕ ಕುಂದುಕೊರತೆ ಸಭೆ ಇಂದು
ಮೈಸೂರು: ನಗರದ ಎಲ್ಲಾ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಆ.17ರ ಬೆಳಗ್ಗೆ 11.30 ರಿಂದ 1.30ರವರೆಗೆ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಲಿದೆ. ಸಂಚಾರ ನಿರೀಕ್ಷಕರು, ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸುವರು. ಸಾರ್ವಜನಿಕರು ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಯಾವುದೆ ಸಮಸ್ಯೆ ಇದ್ದಲ್ಲಿ, ಸಂಚಾರ ಸುಗಮಗೊಳಿಸಲು, ಯಾವುದೆ ಮಾಹಿತಿ, ಸಲಹೆ ನೀಡಬಹುದು ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.