ಹೊಸಕೋಟೆಯಲ್ಲಿ ಸ್ವಚ್ಛತಾ ಆಂದೋಲನ
ಸುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಂಜನಗೂಡು ತಾಲೂಕಿನ ಎಸ್.ಹೊಸಕೋಟೆ ಗ್ರಾಮದಲ್ಲಿ ಪರಿಸರ ಸ್ವಚ್ಛತಾ ಅಭಿಯಾನ ಮತ್ತು ಶೌಚಾಲಯ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಜಯಸ್ತ್ರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಆರೋಗ್ಯದಿಂದ ಬಾಳಲು ಮನೆಯ ಸುತ್ತ ಪರಿಸರ ಹಾಗೂ ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಂಡರೆ ಆರೋಗ್ಯವಂತ ಕುಟುಂಬವಂತರಾಗಲು ಸಲಹೆ ನೀಡಿದರು.
ಸುತ್ತೂರು ವಲಯ ಮೇಲ್ವಿಚಾರಕಿ ಪಿ.ಜಯಲಕ್ಷ್ಮಿ ಮಾತನಾಡಿದರು. ತಾಪಂ ಸದಸ್ಯ ಎಂ. ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷ ಗೌರಮ್ಮ, ಜವರಯ್ಯ, ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಶಿವಣ್ಣ, ಮೂರ್ತಿ, ಸಂಸ್ಥೆಯ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು ಪರಿಸರ ಸ್ವಚ್ಛತಾ ಜಾಥಾ ನಡೆಸಿದರು.