ರಾಘವೇಂದ್ರ ರತ್ನ ಪ್ರಶಸ್ತಿ ಪ್ರದಾನ
ಮೈಸೂರು: ಶ್ರೀ ರಾಘವೇಂದ್ರ ಪ್ರಕಾಶನದ ವತಿಯಿಂದ ನಡೆದ ಶ್ರೀ ರಾಘವೇಂದ್ರ ರತ್ನ ಪ್ರಶಸ್ತಿ ಸಮಾರಂಭವನ್ನು ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್.ಎಸ್. ಯುಮೀಂದ್ರಾಚಾರ್ಯ ಉದ್ಘಾಟಿಸಿದರು. ಲೇಖಕ ಎಸ್. ನಾಗರಾಜ ಅವರ ಪುಸ್ತಕವನ್ನು ಉದ್ಯಮಿ ಟಿ.ಆರ್. ಚಂದ್ರಶೇಖರ್ ಬಿಡುಗಡೆಗೊಳಿಸಿದರು. ಶ್ರೀರಂಗಪಟ್ಟಣದ ಡಾ.ವಿ. ಭಾನುಪ್ರಕಾಶ್ ಶರ್ಮ, ಉದ್ಯಮಿ ಬಿ.ಎಲ್. ನಾಗೇಂದ್ರಪ್ರಸಾದ್, ಕನ್ನಡ ಪರ ಸಂಘಟನೆಗಾರ ಮಡ್ಡೀಕೆರೆ ಗೋಪಾಲ್, ಎಸ್.ಎಸ್. ಸುಯಮೀಂದ್ರಾಚಾರ್ಯ ಅವರಿಗೆ ಶ್ರೀ ರಾಘವೇಂದ್ರ ರತ್ನ ಪ್ರಶಸ್ತಿ ನೀಡಲಾಯಿತು.