ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಯುರ್ವೇದ ಪದ್ಧತಿಗೆ ಮಹತ್ವ ಬೇಕು: ಬಸವರಾಜು

Vishwanath S
Updated On : 19 Aug 2013, 12:14 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 18
ಇಂದು ಆಯುರ್ವೇದ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಮೈಸೂರು ಉಪವಿಭಾಗಾಧಿಕಾರಿ ಬಸವರಾಜು ಹೇಳಿದರು.
ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರವು ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಜ್ಞಾ ಕುಟೀರದಲ್ಲಿ ಭಾನುವಾರ ಏರ್ಪಡಿಸಿದ್ದ ವೈದ್ಯಕೀಯ ಉಚಿತ ತಪಾಸಣೆ ಹಾಗೂ ಮೂಳೆ ಸಾಂಧ್ರತಾ ಪರೀಕ್ಷೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪ್ರಾಚೀನ ಪದ್ಧತಿಯಾಗಿರುವ ಆಯುರ್ವೇದ ಚಿಕಿತ್ಸೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದರ ಚಿಕಿತ್ಸಾ ಕ್ರಮ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ ಇಂದಿನ ಜನತೆ ಹೆಚ್ಚಾಗಿ ಆಯುರ್ವೇದಕ್ಕೆ ಮಹತ್ವ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಪಂ ಸಿಇಒ ಪಿ.ಎ. ಗೋಪಾಲ್, ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯ ಬಗ್ಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ನಮ್ಮ ಪ್ರಾಚೀನ ಪದ್ಧತಿಗಳನ್ನು ಅನುಸರಿಸುವಲ್ಲಿ ಅಪಾರ ಕಾಳಜಿ ವಹಿಸುವುದು ಅಗತ್ಯ ಎಂದು ತಿಳಿಸಿದರು.
ಬೀರಿಹುಂಡಿ ಗ್ರಾಪಂ ಸದಸ್ಯ ಪ್ರಭುಸ್ವಾಮಿ ಮಾತನಾಡಿ, ಜನರಿಗೆ ಆಯುರ್ವೇದ ಕುರಿತು ಹೆಚ್ಚಿನ ಅರಿವು ಮೂಡಿಸುವುದು ಅವಶ್ಯಕ. ಈ ದಿಸೆಯಲ್ಲಿ ಇಂತಹ ಶಿಬಿರಗಳು ಹೆಚ್ಚಾಗಿ ನಡೆಯಬೇಕು. ಪ್ರಜ್ಞಾ ಕುಟೀರ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆ ಸಂಚಾಲಕಿ ಡಾ. ಪೂರ್ಣಿಮಾ ಕೆ. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಆಯೋಜಕ ಡಾ. ಎನ್.ವಿ. ಕೃಷ್ಣಮೂರ್ತಿ, ಆಭಿಜ್ಞಾ ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಆಯುರ್ವೇದ ಮತ್ತು ಯೋಗ ಸಂಸ್ಥೆ ನಿರ್ದೇಶಕಿ ಮೀರಾ ರಾಮರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement