ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಂದಕ ಕಾಮಗಾರಿ ಅಸಮರ್ಪಕ

Vishwanath S
Updated On : 19 Aug 2013, 12:14 pm

ಕ.ಪ್ರ.ವಾರ್ತೆ ,  ಕೊಳ್ಳೇಗಾಲ ,  ಆ.18
ತಾಲೂಕಿನ ಅರಬಗೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ ಟೆಂಡರ್ ಮೂಲಕ ಕೈಗೊಳ್ಳಲಾಗಿದ್ದ ಆನೆಕಂದಕದ ಕಾಮಗಾರಿ ಬಗ್ಗೆ ರೈತರಲ್ಲಿ ವ್ಯಾಪಕ ಅಸಮಾಧಾನ ಕೇಳಿ ಬಂದಿದೆ.
ಇಲಾಖೆ ಲಕ್ಷಾಂತರ ರು.ಗಳ ಅಂದಾಜಿನಲ್ಲಿ ಕಳೆದ 1 ವರ್ಷದ ಹಿಂದೆ ಕೈಗೊಂಡಿದ್ದ ಕಾಮಗಾರಿ ಇತ್ತೀಚೆಗೆ ಪೂರ್ಣಗೊಂಡಿದೆ. ಆದರೆ ಕಾಮಗಾರಿ ಭರದಲ್ಲಿ ಮುಗಿಸುವ ನೆಪದಲ್ಲಿ ಅಡ್ಡ ಬಂದ ಭಾರಿ ಗಾತ್ರದ ಕಲ್ಲುಗಳನ್ನು ತೆಗೆಯದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಸುಲಭವಾಗಿ ಕಾಡು ಹಂದಿಗಳು ರೈತರ ಜಮೀನು ಪ್ರವೇಶಿಸಲು ದಾರಿ ಮಾಡಿಕೊಟ್ಟಂತಾಗಿದೆ.
ಅರಬಗೆರೆ 85ರ ಗ್ರಾಮ ವ್ಯಾಪ್ತಿಯಲ್ಲಿ ಬರುವ ರೈತರ ಸರ್ವೆ ನಂಬರ್ 281, 283, 287 ಸೇರಿದಂತೆ ಹಲವೆಡೆಯಿಂದ ಕಂದಕ ಹಾದುಹೋಗಿದ್ದು ಕಾಮಗಾರಿ ನಡೆಸುವ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಅಧಿಕ ಭಾರಿ ಗಾತ್ರದ ಕಲ್ಲುಗಳು ಪತ್ತೆಯಾಗಿದೆ. ಗುತ್ತಿಗೆದಾರರು ಕಲ್ಲುಗಳನ್ನು ಹಾಗೆಯೇ ಉಳಿಸಿರುವುದರಿಂದ ಕಾಮಗಾರಿ ಪೂರ್ಣವಾಗಿಲ್ಲ.  
ಕಂದಕದ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಪತ್ತೆಯಾದ ಕಲ್ಲುಗಳನ್ನು ಸಿಡಿಮದ್ದು ಪ್ರಯೋಗಿಸಿ ಸಿಡಿಸಬಹುದಿತ್ತು ಅಥವಾ ಕೂಲಿ ಕಾರ್ಮಿಕರ ಮೂಲಕವೇ ಕಲ್ಲುಗಳನ್ನು ತೆರೆವುಗೊಳಿಸಿ ಕಂದಕ    ಕಾಮಗಾರಿಯನ್ನು ಉತ್ತಮ ರೀತಿ ನಿರ್ವಹಿಸಬಹುದಿತ್ತು. ಗುತ್ತಿಗೆದಾರರಿಗೆ ಇಲಾಖೆ ಪೂರ್ಣ ಬಿಲ್ ಪಾವತಿಸಿದೆ. ಗ್ರಾಮ ಅರಣ್ಯ ಸಮಿತಿ ಸಭೆಯಲ್ಲೂ ಈ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ರೈತರು ಈ ಸಂಬಂಧ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಆನೆಕಂದಕ ಕಾಮಗಾರಿಯಲ್ಲಿ ಉಳಿಸಿರುವ ಕಲ್ಲುಗಳನ್ನು ತೆಗೆಸಿ ಪ್ರಾಣಿಗಳ ಕಾಟ ತಪ್ಪಿಸಬೇಕಿದೆ.

-ಎನ್.ನಾಗೇಂದ್ರಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement