ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ಸೇತರ ಮತಗಳ ಧ್ರುವೀಕರಣಕ್ಕೆ ಮೈತ್ರಿ

Vishwanath S
Updated On : 19 Aug 2013, 12:13 pm

ಕ.ಪ್ರ.ವಾರ್ತೆ ,  ಟಿ.ನರಸೀಪುರ ,  ಆ. 18
ಲೋಕಸಭೆ ಹಾಗೂ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಮತಗಳ ಧ್ರುವೀಕರಣಕ್ಕೆ ಅನ್ಯಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಸಮರ್ಥಿಸಿಕೊಂಡರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷ ಗೆಲ್ಲುವುದು ವಾಡಿಕೆಯಾಗಿದೆ. ಆದರೆ ನಾವು ಕಾಂಗ್ರೆಸ್ ಅನ್ನು ಸೋಲಿಸಲೇಬೇಕೆಂದು ಎರಡು ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಹಾಗೂ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕೆಜೆಪಿಗೆ ಬೆಂಬಲ ನೀಡಿರುವುದಾಗಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಆರಂಭದಲ್ಲಿಯೇ ಗ್ರಾಪಂ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಪಂಚಾಯಿತಿ ಪ್ರತಿನಿಧಿಗಳ ಅಧಿಕಾರ ಕಸಿದುಕೊಳ್ಳಲಿರುವ ಕಾಂಗ್ರೆಸ್‌ಗೆ ಪಂಚಾಯಿತಿ ಪ್ರತಿನಿಧಿಗಳು ಮತ ನೀಡಬಾರದು. ಈ ಹಿಂದೆ ಬಿಜೆಪಿ ಗೆದ್ದಿರುವ ಹಿನ್ನೆಲೆಯಲ್ಲಿ ಕೆಜೆಪಿ ಅಭ್ಯರ್ಥಿ ಯು.ಎಸ್. ಶೇಖರ್ ಅವರಿಗೆ ಮತ ನೀಡುವಂತೆ ಅವರು ಕೋರಿದರು.
ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಮಾತನಾಡಿ, ತಲಕಾಡು ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕವಾಗಿ ಮರಳು ಗಣಿಗಾರಿಕೆ ನಡೆದ ಪರಿಣಾಮ ಹನ್ನೊಂದು ಶತಮಾನಗಳಷ್ಟು ಹಳೆಯದಾದ ಮಾಧವ ಮಂತ್ರಿ ಅಣೆಕಟ್ಟೆ ಒಡೆದು ಹೋಗಿದೆ. ಮರಳು ಗಣಿಗಾರಿಕೆಯಿಂದ ಅಣೆಕಟ್ಟೆ ಹಾಗೂ ಸೇತುವೆಗಳಿಗೆ ಧಕ್ಕೆಯಾಗುತ್ತದೆಯೋ, ಇಲ್ಲವೋ ಎಂದು ತಾವು ವಿಧಾನ ಪರಿಷತ್‌ನಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಪ್ರಶ್ನಿಸಿದರೆ ಉತ್ತರವನ್ನೇ ನೀಡಲಿಲ್ಲ ಎಂದು ದೂರಿದರು.
ಮಾಜಿ ಶಾಸಕ ಸಿ. ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಮಹದೇವಯ್ಯ, ಬಸವರಾಜು, ಬಸವರಾಜು, ಶಿವನಂಜಪ್ಪ, ಶಿವಬಸಪ್ಪ, ಶಿವಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement