ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ'

Vishwanath S
Updated On : 19 Aug 2013, 12:13 pm

ಕ.ಪ್ರ.ವಾರ್ತೆ ,  ಹುಣಸೂರು ,  ಆ. 18
ಅತಿ ಹಿಂದುಳಿದ ಜನಾಂಗಕ್ಕೆ ಸೇರಿದ ಗೋಂಧಳಿ ಸಮಾಜ ಮುಖ್ಯವಾಹಿನಿಗೆ ಬರಬೇಕಾದಲ್ಲಿ ಸಂಘಟನಾತ್ಮಕ ಹೋರಾಟ ಅಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘ ಮತ್ತು ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಕೆ.ಎಂ. ಜಯರಾಮಯ್ಯ ಅಭಿಪ್ರಾಯಪಟ್ಟರು.
ಭಾನುವಾರ ಪಟ್ಟಣದ ಪರಸಯ್ಯನ ಛತ್ರದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ 8 ಜಿಲ್ಲೆಗಳ 43 ತಾಲೂಕುಗಳ ಸದಸ್ಯರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅತಿಕಡಿಮೆ ಸಂಖ್ಯೆಯಲ್ಲಿರುವ ನಾವು ಸಮಾಜದ ಮುಖ್ಯವಾಹಿನಿಗೆ ಬರಬೇಕಾದಲ್ಲಿ ನಮ್ಮ ಹಕ್ಕುಗಳಿಗಾಗಿ ಸಂಘಟನಾತ್ಮಕ ಹೋರಾಟದ ಜತೆಗೆ ಎಲ್ಲರೂ ಸುಶಿಕ್ಷಿತರಾಗಲೇಬೇಕು ಎಂದರು.
ಶಿಕ್ಷಣ ಮಾತ್ರ ನಮ್ಮ ಬಹುತೇಕ ಸಮಸ್ಯೆಗಳನ್ನು ನೀಗಿಸಬಲ್ಲದು. ಈ ಸತ್ಯವನ್ನು ಸಮಾಜದ ಹಿರಿಯರು ಗಮನಿಸಬೇಕು. ಅಂತೆಯೇ ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣವಂಚಿತರನ್ನಾಗಿ ಮಾಡಬೇಡಿ. ಒಗ್ಗಟ್ಟಿನ ಹೋರಾಟ ಮಾತ್ರ ಅಧಿಕಾರ ಪಡೆಯುವ ಏಕೈಕ ಸಾಧನವಾಗಿದೆ ಎಂದು ಕಿವಿಮಾತು ಹೇಳಿದರು.
ಸರ್ಕಾರದ ಸವಲತ್ತು ಬಗ್ಗೆ ತಿಳಿಸಿ: ಗೋಂಧಳಿ, ಬುಡಬುಡಿಕೆ, ಜೋಷಿ, ವಾಸುದೇವ ಮೊದಲಾದ ಅಲೆಮಾರಿ ಜನಾಂಗಗಳಿಗೆ ಸರ್ಕಾರದಿಂದ ದೊರೆಯುತ್ತಿರುವ ಸವಲತ್ತುಗಳನ್ನು ತಿಳಿಸಲು ತಾಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೇ ಅಲೆಮಾರಿ ಜಾತಿಗಳ ಜನರು ಒಂದು ಕಡೆ ನೆಲೆ ನಿಲ್ಲಲು ವಸತಿ ಸೌಕರ್ಯ ಕಲ್ಪಿಸಿಕೊಟ್ಟಲ್ಲಿ ಅಲೆಮಾರಿ ಎಂಬ ಹಣೆಪಟ್ಟಿ ಕಳಚುತ್ತದೆ. ಅಲೆಮಾರಿ ಮಕ್ಕಳಿಗೆ ಪ್ರವರ್ಗ-1ರ ಅಡಿ ಉಚಿತ ಪ್ರವೇಶ ಹಾಗೂ ವಿದ್ಯಾರ್ಥಿ ವೇತನ ನೀಡುವ ಸರ್ಕಾರದ ಆದೇಶವನ್ನು ತಿಳಿಸಬೇಕು ಎಂದರು.
ತಾಲೂಕು ಅಧ್ಯಕ್ಷ ಅರಕೇಶ್ವರ್, ಕಾರ್ಯದರ್ಶಿ ಗೋಂಧಳಿ ಗೋಪಾಲ್, ತಾಲೂಕು ಗೌರವಾಧ್ಯಕ್ಷ ಟಿ. ಚಂದ್ರ, ವಿಭಾಗೀಯ ಉಪಾಧ್ಯಕ್ಷ ತುಕಾರಾಮ್ ಗುಡ್ಕರ್, ವೀರೇಶ್ ಪಾಚೆಂಗೆ, ಜಯರಾಮ್ ಕೆ. ಬೋರತ್, ಪ್ರಧಾನ ಕಾರ್ಯದರ್ಶಿ ರವಿಕೋಂಡೆ ಸೇರಿದಂತೆ 500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement