ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶೋಷಿತರು ಕಾಂಗ್ರೆಸ್ ಬೆಂಬಲಿಸಬೇಕು: ಅಚ್ಚುತಾನಂದ

Vishwanath S
Updated On : 19 Aug 2013, 12:13 pm

ಕೆ.ಆರ್. ನಗರ: ಹಿಂದುಳಿದವರು, ತುಳಿತಕ್ಕೊಳಗಾದವರು ಮತ್ತು ದಲಿತರು ಕಾಂಗ್ರೆಸ್ ಬೆಂಬಲಿಸಬೇಕು ಎಂದು ದಲಿತ ಮುಖಂಡ ಅಚ್ಚುತಾನಂದ ಹೇಳಿದರು.
ಪಟ್ಟಣದ ವೈದ್ಯಕೀಯ ಸಮುದಾಯ ಭವನದಲ್ಲಿ ಕರೆದಿದ್ದ ದಲಿತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಕೋಮುವಾದಿಗಳೊಂದಿಗೆ ಕೈ ಜೋಡಿಸಿರುವ ಜೆಡಿಎಸ್ ಪಕ್ಷವನ್ನು ತಿರಸ್ಕರಿಸುವಂತೆ ಕರೆ ನೀಡಿದರು.
ಹಿಂದುಳಿದವರ ಏಳಿಗೆಗೆ ಯಾವ ಕೊಡುಗೆಯನ್ನು ನೀಡದ ಜೆಡಿಎಸ್ ಚುನಾವಣಾ ಸಮಯದಲ್ಲಿ ದಲಿತರ ಉದ್ಧಾರದ ಮಾತನಾಡುತ್ತಿದೆ. ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ದಲಿತ ವಿರೋಧಿಗಳಾಗಿದ್ದಾರೆ. ಆದರೂ ಕೆಲವು ದಲಿತರೆ ಆ ಪಕ್ಷವನ್ನು ಬೆಂಬಲಿಸುತ್ತಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣ ಪಡೆದಿಲ್ಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ದೊಡ್ಡಸ್ವಾಮೇಗೌಡರಿಂದ 65 ಲಕ್ಷ ಪಡೆದಿದ್ದೇನೆ ಎಂದು ನಮ್ಮ ಸಮುದಾಯದವರೆ ಅಪಪ್ರಚಾರ ಮಾಡುತ್ತಿದ್ದರು. ನನಗೆ ಅಂತಹ ದೈನೇಸಿ ಸ್ಥಿತಿ ಬಂದಿಲ್ಲ. ತಾಕತ್ತಿದ್ದರೆ ನನ್ನ ಮೇಲಿನ ಆರೋಪವನ್ನು ಕಪ್ಪಡಿ ಕ್ಷೇತ್ರಕ್ಕೆ ಬಂದು ಸಾಬೀತುಪಡಿಸಲಿ ಎಂದು ವಿರೋಧಿಗಳಿಗೆ ಸವಾಲು ಹಾಕಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ಮಾಜಿ ಸದಸ್ಯ ಎಂ.ತಮ್ಮಣ್ಣ, ಪುರಸಭೆ ಸದಸ್ಯೆ ಸರೋಜ ಮಹದೇವ್, ಗ್ರಾಪಂ ಸದಸ್ಯ ಸ್ವಾಮಿನಾಥ್, ಡೋರನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಂ. ಗಿರೀಶ್, ವೆಂಕಟೇಶ್, ರಾಮಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement