ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆರೋಪ ಸಾಬೀತು ಮಾಡಿ: ವಿಶ್ವನಾಥ್‌ಗೆ ಸಾ.ರಾ ಸವಾಲು

Vishwanath S
Updated On : 20 Aug 2013, 12:22 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 19
ಸಂಸದ ಎಚ್. ವಿಶ್ವನಾಥ್ ಮತ್ತು ಅವರ ಕುಟುಂಬದವರು ನಡೆಸಿರುವ ಅವ್ಯವಹಾರಗಳ ದಾಖಲೆಯನ್ನು ಹದಿನೈದು ದಿನಗಳೊಳಗೆ ಬಿಡುಗಡೆ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಶ್ರೀರಾಮ ಸಕ್ಕರೆ ಕಾರ್ಖಾನೆ, ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ, ಸಕ್ಕರೆ ಮಾರಿ ಅಕ್ಕಿ ನೀಡಿದ ಆರೋಪ ಮತ್ತು ಸಮಾಜ ಪರಿವರ್ತನಾ ಹೋರಾಟಗಾರ ಎಸ್.ಆರ್. ಹಿರೇಮಠ್ ಅವರ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ನಾನು 13ನೆಯವನು ಎಂದು ನನ್ನ ಮೇಲೆ ಆರೋಪಿಸಲಾಗಿದೆ. ಈ ಪೈಕಿ ಒಂದು ಆರೋಪವನ್ನು ಸಾಬೀತುಪಡಿಸಿದರೂ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನನ್ನ ಮೇಲಿನ ಆರೋಪ ನಿಜವಾದರೆ ತನಿಖೆ ನಡೆಸಿ ಜೈಲಿಗೆ ಕಳುಹಿಸಲಿ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯನ್ನು ಅಕ್ರಮ ಸಂಬಂಧ ಎಂದು ವಿಶ್ವನಾಥ್ ಟೀಕಿಸಿದ್ದಾರೆ. ಅಕ್ರಮವನ್ನು ಸಕ್ರಮ ಮಾಡುವಲ್ಲಿ ವಿಶ್ವನಾಥ್ ನಿಸ್ಸೀಮರು. ಅವರಿಗೆ ಬಹಳ ಅನುಭವ ಇದೆ ಎಂದು ತಿರುಗೇಟು ನೀಡಿದರು.
ದಾಳಿ ಹಿಂದೆ ವಿಶ್ವನಾಥ್ ಕೈವಾಡ: ಆದಿಚುಂಚನಗಿರಿ ಮಠದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ಹಿಂದೆ ವಿಶ್ವನಾಥ್ ಕೈವಾಡ ಇದೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement