ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಚ್.ಡಿ. ಕೋಟೆ ಛಾಯಾಗ್ರಾಹಕರ ಸ್ವರ್ಗ

Vishwanath S
Updated On : 20 Aug 2013, 12:27 pm

ಎಚ್.ಡಿ. ಕೋಟೆ: ತಾಲೂಕು ಛಾಯಾಗ್ರಾಹಕರ ಸಂಘವು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಪಟ್ಟಣದ ಮಂಜುನಾಥ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿತ್ತು.
ತಹಸೀಲ್ದಾರ್ ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕು ಮಟ್ಟದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ನಡೆಸುತ್ತಿರುವುದು ಹೆಮ್ಮೆಯ ವಿಷಯ. ತಾಲೂಕಿನ ಛಾಯಾಗ್ರಾಹಕರಿಗೆ ಉತ್ತಮ ಚಿತ್ರಗಳನ್ನು ತೆಗೆಯಲು ಸಾಕಷ್ಟು ಅವಕಾಶವಿದೆ. ಇದು ಛಾಯಾಗ್ರಾಹಕರ ಸ್ವರ್ಗ. ಇಲ್ಲಿ ಉತ್ತಮವಾದ ಚಿತ್ರಗಳನ್ನು ತೆಗೆದು ರಾಜ್ಯದ ಜನತೆಯನ್ನು ತಾಲೂಕಿನತ್ತ ಸೆಳೆಯಬೇಕು ಎಂದರು.
ಛಾಯಾಗ್ರಾಹಕ ಜಿ.ಎಸ್. ರವಿಶಂಕರ್ ಮಾತನಾಡಿದರು. ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ರಾಜು ಸಾಗರ್, ಬಿಇಒ ಮಂಜುನಾಥ್, ಅರಸ್, ಶಿವು, ಶ್ರೀನಿಧಿ, ಸ್ವಸ್ಥಿಕ್ ರಾಜು, ಕಾರ್ಯದರ್ಶಿ ಶಂಕರ್, ಪ್ರಮೋದ್, ಶೈಲಿ, ಸ್ವಾಮಿ, ಗುರುನಾಯಕ್, ಪಾರಿ, ಮಂಜುನಾಥ್, ಮಂಜು, ರಂಗನಾಥ, ಜಯಪ್ರಕಾಶ್, ಉಮೇಶ್, ರವಿ, ಮಹೇಶ್, ರಾಜೇಶ್, ಮುರಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement