ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೆಳ ಹಂತದ ಜನಪ್ರತಿನಿಧಿಗಳ ಅಧಿಕಾರ ಕಸಿಯಲು ಯತ್ನ: ಜಿಟಿಡಿ ಟೀಕೆ

Vishwanath S
Updated On : 20 Aug 2013, 12:21 pm

ಪಿರಿಯಾಪಟ್ಟಣ: ಕಾಂಗ್ರೆಸ್ ಕೆಳ ಹಂತದ ಜನಪ್ರತಿನಿಧಿಗಳ ಅಧಿಕಾರ ಕಸಿದುಕೊಳ್ಳಲು ವಿಶೇಷ ಕಾನೂನು ತರಲು ಹೊರಟಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಟೀಕಿಸಿದರು. ಇಲ್ಲಿನ ಮಂಜುನಾಥ ಸಮುದಾಯ ಭವನದಲ್ಲಿ ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೆಳಹಂತದ ಜನಪ್ರತಿನಿಧಿಗಳ ಅಧಿಕಾರ ಕಸಿದುಕೊಳ್ಳಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಗ್ರಾಪಂ ಸದಸ್ಯರು ತಕ್ಕ ಪಾಠ ಕಲಿಸುವ ಅಗತ್ಯವಿದೆ. ಕುಟುಂಬ ರಾಜಕಾರಣ ಯಾರನ್ನು ಬಿಟ್ಟಿಲ್ಲ. ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಹೀಗೆ ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕೀಯ ಮುಂದುವರಿದಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಟೀಕಿಸುವುದನ್ನೇ ಕಾಂಗ್ರೆಸ್ ವಿಧಾನ ಪರಿಷತ್ ಹಾಗೂ ಲೋಕಸಭಾ ಉಪ ಚುನಾವಣೆಗಳ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಬೇಸರದ ಸಂಗತಿಯಾಗಿದೆ ಎಂದರು. ಮೈಸೂರು-ಚಾಮರಾಜನಗರ ವಿಧಾನ ಪರಿಷತ್‌ನ ಬಿಜೆಪಿ, ಜೆಡಿಎಸ್ ಹಾಗೂ ಕೆಜೆಪಿ ಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿರುವ ಯು.ಎಸ್. ಶೇಖರ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡುವಂತೆ ಅವರು ಮನವಿ ಮಾಡಿದರು.
ಅಭ್ಯರ್ಥಿ ಯು.ಎಸ್. ಶೇಖರ್ ಮಾತನಾಡಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಚಿಕ್ಕಮಾದು, ಕೆಜೆಪಿ ಪಕ್ಷದ ಎಸ್ಸಿ, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ನಿಂಗರಾಜಮಲ್ಲಾಡಿ, ಮುಖಂಡರಾದ ಎಲ್. ಆನಂದ್, ಗೋವಿಂದೇಗೌಡ, ಬಿ.ವಿ. ಜವರೇಗೌಡ ಮಾತನಾಡಿದರು. ಜಿಪಂ ಸದಸ್ಯ ಎಸ್.ಎ.ಶಿವಣ್ಣ, ತಾಪಂ ಅಧ್ಯಕ್ಷ ರವಿನಾಯಕ, ಉಪಾಧ್ಯಕ್ಷ ಯೋಗೇಶ್, ಸದಸ್ಯರಾದ ರತ್ನಮ್ಮ, ಗೀತಾ, ಶೈಲಜಾ, ಪವಿತ್ರಾ, ಜವರಪ್ಪ, ರಘುನಾಥ್, ಶಂಕರಪ್ಪ, ಆರ್.ಎಸ್. ಮಹದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement