ಭೈರಪ್ಪ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು: 25ಕ್ಕೆ ಪುಸ್ತಕ ಬಿಡುಗಡೆ
ಮೈಸೂರು: ಸುಂದರ ಪ್ರಕಾಶನ ಹೊರತಂದಿರುವ 225ನೇ ಪುಸ್ತಕವಾದ ಡಾ.ಪ್ರಧಾನ್ ಗುರುದತ್ತ, ಗೌರಿ ಸುಂದರ್ ಸಂಪಾದಿಸಿರುವ ಡಾ.ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಪುಸ್ತಕ ಬಿಡುಗಡೆ ಸಮಾರಂಭವು ಆ.25 ರಂದು ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ಡಾ.ಪ್ರಧಾನ ಗುರುದತ್ತ, ಪ್ರೊ.ಎನ್.ಎಸ್. ತಾರಾನಾಥ್, ಡಾ.ಜಿ.ಬಿ. ಹರೀಶ್, ಡಾ.ಕೆ.ಸತ್ಯನಾರಾಯಣ, ಪ್ರೊ.ಆರ್. ಇಂದಿರಾ, ಭಾರತಿ ಕಾಸರಗೋಡು ಭಾಗವಹಿಸುವರು. ಬಿ.ಎಸ್. ಪಾರ್ಥಸಾರಥಿ, ಪ್ರೊ.ಜಿ.ಎಲ್. ಶೇಖರ್, ಎಸ್.ಎಲ್. ರಾಮಚಂದ್ರ, ಲಕ್ಷ್ಮೀನಾರಾಯಣ ಬಾಬು, ಎನ್. ಆನಂದರಾಮರಾವ್ ಅವರಿಗೆ ಗೌರವ ಸಮರ್ಪಿಸಲಾಗುವುದು ಎಂದು ಗೌರಿಸುಂದರ್ ತಿಳಿಸಿದ್ದಾರೆ.