ದೇಗುಲ ನಿರ್ಮಾಣ ಜಾಗ ವಿವಾದ: ಪ್ರತಿಭಟನೆ
ಹ್ಯಾಂಡ್ಪೋಸ್ಟ್: ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ದೇವಸ್ಥಾನದ ನಿರ್ಮಿಸಲು ಅವಕಾಶ ನೀಡದೆ, ಕಂದಾಯ ಇಲಾಖೆ ಅಧಿಕಾರಿಗಳ ಕ್ರಮ ವಿರೋಧಿಸಿ ಎಚ್.ಡಿ. ಕೋಟೆ ತಾಲೂಕಿನ ಯರಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದರು.
ಬೂಪ್ಪನಹಳ್ಳಿ ಗ್ರಾಮದ ಪುಟ್ಟೆಗೌಡ ಎಂಬವರು ಪಟ್ಟಾಲದಮ್ಮ ದೇವಸ್ಥಾನಕ್ಕೆ ಸೇರಿದ 28 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಜಾಗ ತೆರವುಗೊಳಿಸುವಂತೆ ಹುಣಸೂರು ಉಪವಿಭಾಗಾಧಿಕಾರಿ 2008ರಲ್ಲಿ ಆದೇಶಿಸಿದ್ದರು. ಇದರ ಪ್ರಕಾರ ಎರಡು ವರ್ಷಗಳ ಹಿಂದೆ ದೇವಸ್ಥಾನ ಜಾಗವನ್ನು ತಹಸೀಲ್ದಾರ್ ಕೆ. ಕೃಷ್ಣ ಜಾಗ ತೆರವುಗೊಳಿಸಿ ಯರಹಳ್ಳಿ ಗ್ರಾಮಸ್ಥರಿಗೆ ಬಿಡಿಸಿ ಕೊಟ್ಟಿದ್ದರು.
ದೇವಸ್ಥಾನದ ಜಾಗದಲ್ಲಿ ಪುಟ್ಟೆಗೌಡ ಮತ್ತೆ ಬೆಳೆ ಹಾಕಿಕೊಂಡಾಗ, ಗ್ರಾಮಸ್ಥರು ತಹಸೀಲ್ದಾರ್ಗೆ ದೂರು ನೀಡಿದರು. ಕಂದಾಯ ಇಲಾಖೆ, ಪೊಲೀಸ್ ಇಲಾಖೆಯವರಿಗೆ ತಹಸೀಲ್ದಾರ್ ರಕ್ಷಣೆಯೊಂದಿಗೆ ಸ್ಥಳಕ್ಕೆ ಧಾವಿಸಿ, ಜಾಗವನ್ನು ತೆರವುಗೊಳಿಸುವ ವೇಳೆ ಪುಟ್ಟೆಗೌಡ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ವೇಳೆ ತಹಸೀಲ್ದಾರ್ ಒತ್ತುವರಿಯನ್ನು ನಿಲ್ಲಿಸುವಂತೆ ಆದೇಶಿಸಿದ್ದರಿಂದ ಗ್ರಾಮಸ್ಥರು ಪ್ರತಿಭಟಿಸಿದರು.
ನಂತರ ಪ್ರತಿಭಟನಾಕಾರರೊಂದಿಗೆ ತಹಸೀಲ್ದಾರ್ ಮಾತನಾಡಿ, ಆ. 22ರವರೆಗೆ ಕಾಲಾವಕಾಶ ನೀಡಿ, ನಾನೆ ಖುದ್ದು ನಿಂತು ತೆರವುಗೊಳಿಸುವುದಾಗಿ ಭರವಸೆ ನೀಡಿದರು.
ಕಂದಾಯ ಇಲಾಖೆಯ ಆರ್ಐ ರವಿಚಂದ್ರ, ಸರ್ವೇಯಾರ್ ಪ್ರವೀಣ್, ವಿ.ಎ. ಸಿದ್ದರಾಮೇಗೌಡ, ಪೊಲೀಸ್ ಇಲಾಖೆಯ ಮುನಿಯಯ್ಯ, ಶಿವಕುಮಾರ್, ಶ್ರೀಕಂಠಮೂರ್ತಿ, ವೆಂಕಟೇಶ್ ಇದ್ದರು.