ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ನಗರದಲ್ಲಿಅಂತಾರಾಷ್ಟ್ರೀಯ ಸಮ್ಮೇಳನ

Vishwanath S
Updated On : 21 Aug 2013, 12:49 pm

ಕ.ಪ್ರ.ವಾರ್ತೆ , ಮೈಸೂರು , ಆ. 20
ಟೆಕ್ವಿಪ್ 2ನೇ ಹಂತ ಮತ್ತು ಐಇಇಇ ಕಮ್ಯೂನಿಕೇಷನ್ಸ್ ಸೊಸೈಟಿ ಪ್ರಾಯೋಜಕತ್ವದಲ್ಲಿ ಆ. 22 ರಿಂದ 25 ರವರೆಗೆ ಕಂಪ್ಯೂಟಿಂಗ್, ಸಂವಹನ ಮತ್ತು ಮಾಹಿತಿತಜ್ಞತೆ ಅಭಿವೃದ್ಧಿ ಕುರಿತು ನಾಲ್ಕು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವು ಮೈಸೂರಿನ ಎಸ್‌ಜೆಸಿಇ ಸಭಾಂಗಣದಲ್ಲಿ ನಡೆಯಲಿದೆ.
ರಾಷ್ಟ್ರೀಯ ವೈಮಾನಿಕ ಪ್ರಯೋಗಾಲದ ನಿವೃತ್ತ ನಿರ್ದೇಶಕ ಡಾ.ಎ.ಆರ್. ಉಪಾಧ್ಯ ಅವರು ಆ. 22ರ ಬೆಳಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟಿಸುವರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಅಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟ್‌ಕೆರೂರ್ ಅಧ್ಯಕ್ಷತೆ ವಹಿಸುವರು. ಐಸಿಎಸಿಸಿಐ ಪ್ರಧಾನ ಅಧ್ಯಕ್ಷರಾದ ಐಐಐಟಿ- ಕೆಯ ಡಾ. ಸಾಬು ಎಂ. ತಂಬಿ ಸಮ್ಮೇಳನದ ಪರಿಚಯ ಭಾಷಣ ಮಾಡುವರು ಎಂದು ಎಸ್‌ಜೆಸಿಇ ಪ್ರಾಂಶುಪಾಲ ಡಾ.ಬಿ.ಜಿ. ಸಂಗಮೇಶ್ವರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಐಎಸ್‌ಐ- 2013 ಮತ್ತು ಎಸ್‌ಆರ್‌ಎಸ್- 2013 ಎಂಬ ವಿಷಯಗಳ ಮೇಲೆ ಐಇಇಇ- ಐಸಿಎಸಿಸಿಐ ಸಮ್ಮೇಳನ ನಡೆಯಲಿರುವುದು ಮುಖ್ಯವಾಗಿದೆ.
ಈ ಸಮ್ಮೇಳನದಲ್ಲಿ 8 ವಿಚಾರಗೋಷ್ಠಿಗಳು, 10 ಕಾರ್ಯಾಗಾರ ನಡೆಯಲಿದ್ದು, 46 ದೇಶಗಳಿಂದ ಸಂಶೋಧನಾ ಪ್ರಬಂಧಗಳು ಬಂದಿದ್ದು, 20 ದೇಶಗಳ ಗಣ್ಯರು ಹಾಗೂ ವಿಷಯತಜ್ಞರು ಭಾಗವಹಿಸಿ ಪ್ರಬಂಧ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಎಸ್‌ಜೆಸಿಇ ಪ್ರಧ್ಯಾಪಕರಾದ ಡಾ.ವಿ.ಎನ್. ಮಂಜುನಾಥ್ ಆರಾಧ್ಯ, ಡಾ.ಎಸ್.ಕೆ. ನಿರಂಜನ್, ಪ್ರದೀಪ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement