ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಚ್ಛತೆಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಶಿಖಾ ಸೂಚನೆ

Vishwanath S
Updated On : 21 Aug 2013, 12:50 pm

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ. ಶಿಖಾ ದಸರಾ ಉಪ ಸಮಿತಿಗಳ ಸಭೆಯನ್ನು ಮಂಗಳವಾರ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಉಪ ಸಮಿತಿಗಳಿಗೆ ಅನುದಾನ ನಿಗದಿಪಡಿಸುವ ಕುರಿತು ಚರ್ಚಿಸಿದರು. ಅಲ್ಲದೆ, ನಿಗದಿಗಿಂತ ಹೆಚ್ಚು ಹಣ ವೆಚ್ಚ ಮಾಡಿದರೆ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದರು. ಅದ್ಧೂರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಆಯಾ ಉಪ ಸಮಿತಿಗಳನ್ನು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಲ್ಲದೆ, ಗುಣಮಟ್ಟದ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.
ಪ್ರಚಾರಕ್ಕೆ ಆದ್ಯತೆ ನೀಡಬೇಕು. ಈ ಬಾರಿಯೂ ಗುತ್ತಿಗೆಯನ್ನು ಕೇಂದ್ರಿಕೃತಗೊಳಿಸಲಾಗಿದೆ. ಪ್ರತಿ ಸಮಿತಿಯು ಪ್ರತ್ಯೇಕ ಆಹ್ವಾನ ಪತ್ರಿಕೆ ಮುದ್ರಿಸುವ ಅಗತ್ಯವಿಲ್ಲ. ಒಂದೆ ಆಹ್ವಾನ ಪತ್ರಿಕೆಯಲ್ಲಿ ಎಲ್ಲಾ ಕಾರ್ಯಕ್ರಮ ನಮೂದಿಸಲಾಗಬೇಕು. ಅಲ್ಲದೆ, ತುರ್ತಾಗಿ ಕೈಗೊಳ್ಳಲೆಬೇಕಾದ ಕಾಮಗಾರಿಯನ್ನು ಮಾತ್ರ ಕೈಗೊಳ್ಳಿ, ಬದಲಿಗೆ ಮಂದಗತಿಯಲ್ಲಿ ನಡೆಯುವ ಕಾಮಗಾರಿ ಕೈಗೊಳ್ಳಬೇಡಿ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಪ್ರತಿ ಉಪ ಸಮಿತಿಯು ತಮ್ಮ ಅನುದಾನದಲ್ಲಿ ಇಂತಿಷ್ಟು ಹಣವನ್ನು ಸ್ವಚ್ಛತೆಗೆ ಮೀಸಲಿಡಬೇಕು ಎಂದು ಸಿ. ಶಿಖಾ ಸೂಚಿಸಿದರು.
ದಸರಾದ ಉಪ ವಿಶೇಷಾಧಿಕಾರಿಗಳಾದ ಎಡಿಸಿ ನಾಗಾನಾಯಕ್, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಉಪ ವಿಭಾಗಾಧಿಕಾರಿ ಬಸವರಾಜು ಸೇರಿದಂತೆ ಉಪ ಸಮಿತಿಗಳ ಕಾರ್ಯಾಧ್ಯಕ್ಷರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement