ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಧಾನಪರಿಷತ್ ಉಪ ಚುನಾವಣೆ; ಇಂದು ಮತದಾನ

Vishwanath S
Updated On : 22 Aug 2013, 12:18 pm

ಕ.ಪ್ರ.ವಾರ್ತೆ , ಮೈಸೂರು , ಆ. 21
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಆ. 22ರಂದು ಉಪ ಚುನಾವಣೆ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಮತದಾನವು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಧರ್ಮಸೇನ, ಕೆಜೆಪಿ ಅಭ್ಯರ್ಥಿಯಾಗಿ ಯು.ಎಸ್. ಶೇಖರ್ ಹಾಗೂ ಪಕ್ಷೇತರ ಅಭ್ಯರ್ಥಿ ಅಯೂಬ್‌ಖಾನ್ ಈ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾರರು ಮತ ಪತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಾಶಸ್ತ್ಯವಾಗಿ 1, 2, 3 ಎಂದು ನಮೂದಿಸುವ ಮೂಲಕ ಮತ ಚಲಾಯಿಸಬೇಕು.
1, 2, 3 ಮುಂತಾಗಿ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳನ್ನು ಅಥವಾ ಐ, ಐಐ, ಐಐಐ ರೋಮನ್ ಅಂಕಿ, ದೇವನಾಗರಿ ಅಂಕಿಗಳನ್ನು ಅಥವಾ ಸಂವಿಧಾನದ ಅನುಸೂಚಿಯಲ್ಲಿ ಮನ್ನಣೆ ಪಡೆದಿರುವ ಯಾವುದೇ ಭಾರತೀಯ ಭಾಷೆಯಲ್ಲಿ ಬಳಕೆಯಲ್ಲಿರುವ ಅಂಕಿಗಳನ್ನು ನಮೂದಿಸಬಹುದು. ಅಕ್ಷರದಲ್ಲಿ ಬರೆಯಕೂಡದು.
ಮತ ಕೇಂದ್ರದಲ್ಲಿ ನೀಡಲಾಗುವ ನೇರಳೆ ಸ್ಕೆಚ್ ಪೆನ್ ಅನ್ನು ಮಾತ್ರ ಬಳಸಬೇಕು. ಇತರ ಯಾವುದೇ ಪೆನ್, ಪೆನ್ಸಿಲ್ ಅಥವಾ ಇತರೆ ಯಾವುದೇ ಗುರುತು ಮಾಡುವ ಸಾಧನ ಬಳಸಬಾರದು.
ಮತಗಟ್ಟೆಗಳು: ಚುನಾವಣೆಗಾಗಿ ಒಟ್ಟು 368 ಮತಕೇಂದ್ರಗಳನ್ನು ಭಾರತ ಚುನಾವಣಾ ಆಯೋಗದ ಅನುಮೋದನೆಯೊಂದಿಗೆ ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 243 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 125 ಮತಗಟ್ಟೆಗಳಿದೆ. ಒಟ್ಟು 354 ಗ್ರಾಪಂ ಕಚೇರಿಗಳಲ್ಲಿ ಗ್ರಾಪಂ ಸದಸ್ಯರು ಮತ ಚಲಾಯಿಸಲು ಮತದಾನ ಕೇಂದ್ರಗಳನ್ನು (ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಹೊರತುಪಡಿಸಿ) ಸ್ಥಾಪಿಸಲಾಗಿದೆ.
ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ, ತಾಪಂ ಸದಸ್ಯರು, ಮೈಸೂರು ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಚಾಮುಂಡಿ ಬೆಟ್ಟ ಗ್ರಾಪಂ ಸದಸ್ಯರು ಮತಚಲಾಯಿಸಲು ಈ ಕೆಳಕಂಡ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮತದಾನ ಕೇಂದ್ರಗಳು: ಪಿರಿಯಾಪಟ್ಟಣ ತಾಪಂ ಕಚೇರಿ- ಶಾಸಕರು, ಪಿರಿಯಾಪಟ್ಟಣ ಪಪಂ, ತಾಪಂ ಸದಸ್ಯರು. ಕೆ.ಆರ್. ನಗರ ತಾಪಂ ಕಚೇರಿ- ಶಾಸಕರು, ಕೆ.ಆರ್. ನಗರ ಪುರಸಭೆ, ತಾಪಂ ಸದಸ್ಯರು. ಹುಣಸೂರು ಪುರಸಭೆ- ಶಾಸಕರು, ಹುಣಸೂರು ಪುರಸಭೆ, ತಾಪಂ ಸದಸ್ಯರು. ಮೈಸೂರು ಮಹಾನಗರ ಪಾಲಿಕೆ ಕಚೇರಿ- ಮೈಸೂರು ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರು, ತಾಪಂ ಸದಸ್ಯರು, ನಗರಪಾಲಿಕೆ ಸದಸ್ಯರು, ಚಾಮುಂಡಿಬೆಟ್ಟ ಗ್ರಾಪಂ ಸದಸ್ಯರು. ಎಚ್.ಡಿ. ಕೋಟೆ ತಾಪಂ ಕಚೇರಿ- ಪಪಂ, ತಾಪಂ ಸದಸ್ಯರು. ಸರಗೂರು ಪಪಂ ಕಚೇರಿ- ಪಪಂ ಸದಸ್ಯರು. ನಂಜನಗೂಡು ಪುರಸಭೆ ಕಚೇರಿ- ಶಾಸಕರು, ನಂಜನಗೂಡು ಪುರಸಭೆ, ತಾಪಂ ಸದಸ್ಯರು. ಬನ್ನೂರು ಪುರಸಭೆ ಕಚೇರಿ- ಪುರಸಭೆ ಸದಸ್ಯರು.
ಟಿ. ನರಸೀಪುರ ತಾಪಂ ಕಚೇರಿ- ಟಿ. ನರಸೀಪುರ ಪಪಂ, ತಾಪಂ ಸದಸ್ಯರು.
ಗುಂಡ್ಲುಪೇಟೆ ಪುರಸಭೆ ಕಚೇರಿ- ಶಾಸಕರು, ಗುಂಡ್ಲುಪೇಟೆ ಪುರಸಭೆ, ತಾಪಂ ಸದಸ್ಯರು. ಚಾಮರಾಜನಗರ ನಗರಸಭಾ ಕಾರ್ಯಾಲಯ- ಸಂಸದರು, ಶಾಸಕರು, ಚಾಮರಾಜನಗರ ನಗರಸಭೆ, ಜಿಪಂ, ತಾಪಂ ಸದಸ್ಯರು. ಯಳಂದೂರು ತಾಪಂ- ಶಾಸಕರು, ಯಳಂದೂರು ಪಟ್ಟಣ ಪಂಚಾಯಿತಿ, ತಾಪಂ ಸದಸ್ಯರು. ಕೊಳ್ಳೇಗಾಲ ತಾಪಂ- ಶಾಸಕರು, ಕೊಳ್ಳೇಗಾಲ ನಗರಸಭೆ, ತಾಪಂ ಸದಸ್ಯರು. ಹನೂರು ಪಪಂ ಕಚೇರಿ- ಪಪಂ ಸದಸ್ಯರು.
884 ಸಿಬ್ಬಂದಿ: ಒಟ್ಟು 368 ಮತಗಟ್ಟೆಗಳಲ್ಲಿ 150 ಅತೀ ಸೂಕ್ಷ್ಮ, 138 ಸೂಕ್ಷ್ಮ ಹಾಗೂ 80 ಸಾಮಾನ್ಯ ಮತಗಟ್ಟೆಗಳಿವೆ. ಮತದಾನ ಕಾರ್ಯಕ್ಕಾಗಿ ಒಟ್ಟು 884 ಸಿಬ್ಬಂದಿ ನಿಯೋಜಿಸಲಾಗಿದೆ. ಮೈಸೂರು ಜಿಲ್ಲೆಯ 15 ಹಾಗೂ ಚಾಮರಾಜನಗರ ಜಿಲ್ಲೆಯ 10 ಆಯ್ದ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ.
ಪ್ರತಿಯೊಂದು ಮತಗಟ್ಟೆಗೆ ಆ ಮತಗಟ್ಟೆಯ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸಂಬಂಧಿಸಿದ ಮತದಾರರನ್ನು ಗುರುತಿಸುವ ಸಲುವಾಗಿ ನೇಮಿಸಲಾಗಿದೆ. ಅದಲ್ಲದೆ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ 23 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಮತದಾರರ ಗುರುತಿಗಾಗಿ ಮತಗಟ್ಟೆ ಅಧಿಕಾರಿಗಳಿಗೆ ತೋರಿಸಬೇಕು.
ಮೊಬೈಲ್, ಕ್ಯಾಮೆರಾ ನಿಷೇಧ: ಪ್ರಜಾ ಪ್ರಾತಿನಿಧ್ಯ ಅಧಿನಿಯ ಮತ್ತು ಚುನಾವಣೆ ನಿಯಮಗಳಂತೆ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳನ್ನು ತೆಗೆದುಕೊಂಡು ಮತಪತ್ರದ ಛಾಯಾಚಿತ್ರ ತೆಗೆಯುವುದು ಮತದಾನದ ರಹಸ್ಯ ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಯಾವುದೇ ಮತದಾರರು ಮತಗಟ್ಟೆಗಳಿಗೆ ಮೊಬೈಲ್ ಪೋನ್, ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ತೆಗೆದುಕೊಂಡು ಬಂದಲ್ಲಿ ಅಧ್ಯಕ್ಷಾಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಳ್ಳುವರು. ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತರು, ಎರಡು ಜಿಲ್ಲೆಗಳ ಎಸ್ಪಿಗಳ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮಸ್ಟರಿಂಗ್: ಪಿರಿಯಾಪಟ್ಟಣ ತಾಪಂ, ಕೆ.ಆರ್. ನಗರ ತಾಲೂಕು ಕಚೇರಿ, ಹುಣಸೂರು ತಾಲೂಕು ಕಚೇರಿ, ಮೈಸೂರು ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಎಚ್.ಡಿ.ಕೋಟೆ, ನಂಜನಗೂಡು, ಟಿ. ನರಸೀಪುರ, ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕು ಕಚೇರಿಗಳಲ್ಲಿ ಬುಧವಾರ ಮಸ್ಟರಿಂಗ್ ಕಾರ್ಯ ನಡೆಯಿತು.
ಮತದಾರರು
ಜಿಲ್ಲೆ    ಪುರುಷರು    ಮಹಿಳೆಯರು    ಒಟ್ಟು
ಮೈಸೂರು    2729    2014    4743
ಚಾಮರಾಜನಗರ    1318    949    2267
ಒಟ್ಟು    4047    2963    7010

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement