ಟಿಬೆಟಿಯನ್ ರೈತರು ಅಭಿವೃದ್ಧಿಗೆ ಗಮನ ಹರಿಸಲಿ
ಬೈಲಕುಪ್ಪೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿಕರಿಗೆ ನೀಡುವ ಸವಲತ್ತು ಪಡೆದುಕೊಂಡು ಟಿಬೆಟಿಯನ್ ರೈತರು ಅಭಿವೃದ್ಧಿ ಕಡೆಗೆ ಗಮನ ನೀಡಬೇಕು ಎಂದು ಟಿಬೆಟಿಯನ್ ಗೃಹ ಸಚಿವೆ ಗ್ಯಾರಿ ಡೊಲ್ಮಾ ತಿಳಿಸಿದರು.
ಇಲ್ಲಿನ 2ನೇ ಕ್ಯಾಂಪಿನ ಲಬ್ಸಂಗ್ ಶುಕ್ರವಾರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದರು.
ಭಾರತದ ನೆಹರು, ಮಹಾತ್ಮ ಗಾಂಧೀಜಿ ಅಂಥವರು ಹಿರಿಯರಿಗೆ ಟಿಬೆಟಿಯನ್ ನಿರಾಶ್ರಿತರು ಗೌರವ ನೀಡಬೇಕು. ಕರ್ನಾಟಕ ರಾಜ್ಯದಲ್ಲಿ ಟೆಬೆಟಿಯನ್ ಕುಟುಂಬಕ್ಕೆ 1 ಎಕರೆ ಜಮೀನು ನೀಡಿದೆ. ಅದರಲ್ಲಿ ಟಿಬೆಟಿಯನ್ ರೈತರೆಲ್ಲರೂ ಕೃಷಿ ಮೂಲಕ ಅಭಿವೃದ್ಧಿ ಹೊಂದುವ ಬೆಳೆಯನ್ನು, ಸಾವಯವ ಗೊಬ್ಬರ ಬಳಸಿ ಈ ದೇಶದ ಜನರಿಗೆ ಆಹಾರ ಪೂರೈಕೆ ಮಾಡಬೇಕು ಎಂದರು.
ದೇಶದಲ್ಲಿ ಟಿಬೆಟಿಯನ್ ರೈತರಿಗೆಂದೆ 15 ಸಂಸ್ಥೆಗಳಿದ್ದು, ಇದರ ಹೊಣೆಯನ್ನು ಹೊತ್ತಿರುವ ಈ ದೇಶಕ್ಕೆ ನಾವೆಲ್ಲರೂ ಆಭಾರಿ ಆಗಿರಬೇಕು ಎಂದು ತಿಳಿಸಿದರು.
ಟಿಬೆಟಿಯನ್ ಗೃಹ ಕಾರ್ಯದರ್ಶಿ ದೋರ್ಜಿ, ಬೈಲಕುಪ್ಪೆಯ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮೆಗಾಲಕ್, ಅಧಿಕ್ಷಕರಾದ ಟಷಿ, ಕಾರ್ಯದರ್ಶಿ ಜಿಮಿ, ಹಾಗೂ ಟಿಬೆಟಿಯನ್ ಕೃಷಿಗೆ ಸಂಬಂಧಿಸಿದ ಎಲ್ಲಾ ನಿರ್ದೇಶಕರು ಇದ್ದರು.