ಸಂಸ್ಕೃತಿ ಉಳಿಸಲು ಮುಂದಾಗಿ: ಶಿವರುದ್ರ ಶ್ರೀ
ಕ.ಪ್ರ.ವಾರ್ತೆ , ಟಿ.ನರಸೀಪುರ , ಆ. 23
ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಸ್ತ್ರೀಯರು ಭಾಗಿಯಾಗಬೇಕು ಎಂದು ಮೊರಳೆಗವಿ ಮಠಾಧ್ಯಕ್ಷರಾದ ಚರಮೂರ್ತಿ ಮುಮ್ಮುಡಿ ಶಿವರುದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಸುಕ್ಷೇತ್ರ ತೋಪಿನ ಮಠದಲ್ಲಿ ನಡೆದ ವೈರಾಗ್ಯ ಮೇರು ವಿಶ್ವಗುರು ಸುಜ್ಞಾನ ಪ್ರಭು ಲಿಂಗೈಕ್ಯ ಷಡಕ್ಷರ ಶಿವಯೋಗಿಗಳ 60ನೆ ವರ್ಷದ ಆರಾಧನಾ ಮಹೋತ್ಸವ ಹಾಗೂ 119ನೆ ಹುಣ್ಣಿಮೆ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಚಳವಳಿ ನಾಯಕ ತಾಯೂರು ವಿಠ್ಠಲಮೂರ್ತಿ ಮಾತನಾಡಿ, ಲಿಂಗೈಕ್ಯ ಷಡಕ್ಷರ ಶಿವಯೋಗಿಗಳ ಮಹತ್ಮೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಡುಕುತೊರೆ ಶ್ರೀಗಳು, ಹಣಕೊಳ ಶ್ರೀಗಳು ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರಭುಸ್ವಾಮಿ, ಇಮ್ಮಡಿ ಷಡಕ್ಷರಿಸ್ವಾಮಿ, ವಕೀಲ ಪಾಲಾಕ್ಷಮೂರ್ತಿ ಇದ್ದರು.