ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸೆ. 15ಕ್ಕೆ ಯುವಕರಿಗೆ ಖಡ್ಗ ದೀಕ್ಷೆ

Vishwanath S
Updated On : 24 Aug 2013, 1:00 am

ಕ.ಪ್ರ.ವಾರ್ತೆ ,  ಮೈಸೂರು ,  ಆ. 23
ರಾಷ್ಟ್ರ ರಕ್ಷಣೆಗಾಗಿ ಯುವಕರನ್ನು ಸಂಘಟಿಸಲು ಸೆ. 15 ರಂದು ನಗರದಲ್ಲಿ ಯುವಕರಿಗೆ ಖಡ್ಗ ದೀಕ್ಷೆ ಕಾರ್ಯಕ್ರಮ ಆಯೋಜಿಸಿರುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ತಿಳಿಸಿದೆ. ರಾಜ್ಯದ ರಾಣೆಬೆನ್ನೂರು, ದಾವಣಗೆರೆಯಲ್ಲಿ ಈಗಾಗಲೆ 500 ಮಂದಿ ಯುವಕರಿಗೆ ಖಡ್ದ ದೀಕ್ಷೆ ನೀಡಲಾಗಿದೆ. ಮುಂದಿನ ತಿಂಗಳು ಮೈಸೂರಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ. 30 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಸಭೆಯಲ್ಲಿ ಸ್ಥಳ ನಿಗದಿ ಮಾಡಲಾಗುವುದು. ಅಲ್ಲದೆ, ಕಾಶ್ಮೀರ ಚಲೋ ಹಮ್ಮಿಕೊಳ್ಳುವ ಸಂಬಂಧ ಚರ್ಚಿಸುವುದಾಗಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಶರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾನಿಲಯ ಸ್ಥಾಪಿಸಬಾರದು. ಟಿಪ್ಪು ವಿವಿ ಸ್ಥಾಪಿಸುವ ಮೂಲಕ ಭಾರತದಲ್ಲಿನ ಏಕತೆ ಮುರಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಕಾರ್ಯಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ, ಟಿಪ್ಪು ವಿವಿ ಸ್ಥಾಪನೆಯಾದರೆ ಅದು ಮತ್ತೊಂದು ಛೋಟಾ ಪಾಕಿಸ್ತಾನ ಆಗುತ್ತದೆ. ಅಲ್ಲದೆ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದಕರೊಡನೆ ಜೈಲರ್ ಊಟ ಮಾಡುತ್ತಾರೆ. ಇದಕ್ಕೆ ಹಿರಿಯ ಅಧಿಕಾರಿಗಳ ಬೆಂಬಲ ಇದೆ ಎಂದು ಆರೋಪಿಸಿದರು. ಡಾ. ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement