ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಾರ್ಥ ಬದಿಗೊತ್ತಿ ಸೇವೆ ಮಾಡಿದರೆ ಸಾರ್ಥಕ

Vishwanath S
Updated On : 24 Aug 2013, 1:00 am

ಹುಣಸೂರು: ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಸದಸ್ಯರಾದವರು ಸ್ವಾರ್ಥ ಬದಿಗೊತ್ತಿ ಸಮಾಜ ಸೇವೆಗೆ ತೊಡಗಿಸಿಕೊಂಡಾಗ ಮಾತ್ರ ರೋಟರಿ ಸಂಸ್ಥೆ ರೂಪಿಸಿರುವ ಯೋಜನೆಗಳು ಯಶಸ್ಸಿನ ಶಿಖರ ತಲುಪಲಿವೆ ಎಂದು ರೋಟರಿ ಕ್ಲಬ್ ಮಾಜಿ ಸಹಾಯಕ ರಾಜ್ಯಪಾಲ ಬಿ.ವಿ. ಜವರೇಗೌಡ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ರೋಟರಿ ಸದಸ್ಯತ್ವ ಅಭಿವೃದ್ಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯ ಸದಸ್ಯತ್ವ ಪಡೆಯುವವರು ಅರ್ಜಿ ಸಲ್ಲಿಸಿ ಸದಸ್ಯತ್ವ ಪಡೆಯಲಾಗದು. ಬದಲಾಗಿ ರೋಟರಿ ಸಂಸ್ಥೆಯೇ ಸದಸ್ಯತ್ವಕ್ಕಾಗಿ ವ್ಯಕ್ತಿಗಳನ್ನು ಗುರುತಿಸಿ ಆಹ್ವಾನ ನೀಡುತ್ತದೆ. ರೋಟರಿ ಸದಸ್ಯನೊಬ್ಬ ನಿಸ್ವಾರ್ಥ ಸೇವೆಯ ಮನೋಭಾವನೆ ಹೊಂದಲಿ ಎಂಬುವುದೆ ಈ ರೀತಿಯ ಸದಸ್ಯತ್ವ ನೀಡಲು ಪ್ರಮುಖ ಕಾರಣ ಎಂದು ತಿಳಿಸಿದರು.
ಮಂಡ್ಯಗೆ ವರ್ಗಾವಣೆಗೊಂಡ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ, ತಾ. ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಹನಗೋಡು ನಟರಾಜ್ ಹಾಗೂ ವಿದೇಶ ಪ್ರಯಾಣ ಕೈಗೊಂಡ ರೋಟರಿ ಸದಸ್ಯ ಎಚ್.ಎಸ್. ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಅಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಜಿ. ಮಂಜುನಾಥ್, ನಿಯೋಜಿತ ಅಧ್ಯಕ್ಷ ಧರ್ಮಾಪುರ ನಾರಾಯಣ ರೋಟರಿ ಬಾಂಧವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement