ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

28ಕ್ಕೆ ಇಸ್ಕಾನ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Vishwanath S
Updated On : 26 Aug 2013, 12:28 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 25
ನಗರದ ಜಯನಗರದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ಆ. 28 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಗಿನ ಜಾವ 4 ಗಂಟೆಗೆ ಆರಂಭವಾಗಿ ಮರುದಿನ ರಾತ್ರಿ 1 ರವರೆಗೆ ವಿವಿಧ ಪೂಜಾ ಕಾರ್ಯಕ್ರಮ ನೆರವೇರಲಿದೆ. ವಿಶೇಷವಾಗಿ ಅಲಂಕರಿಸಿದ ಶ್ರೀಕೃಷ್ಣ ಬಲರಾಮರ ದರ್ಶನವನ್ನು ಭಕ್ತರು ಇಡೀ ದಿನ ಪಡೆಯಬಹುದು. ಶ್ರೀಕೃಷ್ಣ ಬಲರಾಮರ ವಿಗ್ರಹಗಳಿಗೆ ಸುದೀರ್ಘವಾದ ಮಹಾಭಿಷೇಕ, ಮಂಗಳಾರತಿ, ಸಂಕೀರ್ತನೆಯನ್ನು ಪರಿಸಮಾಪ್ತಿ ಮಾಡಲಾಗುತ್ತದೆ.
ಬೆಳಗ್ಗೆ 9 ರಿಂದ ರಾತ್ರಿ 10 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6ಕ್ಕೆ ಎಚ್.ಟಿ. ಹರೀಶ್ ಪಾಂಡವ ಮತ್ತು ತಂಡದಿಂದ ಸ್ಯಾಕ್ಸೋಫೋನ್, ಸಂಜೆ 7ಕ್ಕೆ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದಿಂದ ಕೃಷ್ಣಾಮೃತ ನೃತ್ಯರೂಪಕ ಪ್ರಸ್ತುತಪಡಿಸಲಾಗುತ್ತದೆ.
ಉಡುಪಿ ಕೃಷ್ಣಮಂದಿರ: ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಅದ್ಧೂರಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಿದ್ದು, ಆ. 28 ರಿಂದ ಸೆ. 4 ರವರೆಗೆ ವಿವಿಧ ಪೂಜಾ ಕಾರ್ಯಕ್ರಮ ಜರುಗಲಿದೆ. ಆ. 28 ರಂದು ಅಭಿಷೇಕ, ಅರ್ಚನಾ ಪೂಜೆ, ಆ. 29 ರಂದು ವೇಣುವಾದನ, ಆ 30 ರಂದು ವೀಣಾ ವಾದನ, ಆ. 31 ರಂದು ಭರತನಾಟ್ಯ, ಸೆ. 1 ರಂದು ಹರಿಕೀರ್ತನೆ, ಸೆ. 2, 3 ರಂದು ದೇವರನಾಮ, ಸೆ. 4 ರಂದು ಭಕ್ತಿಗೀತೆ, ವೀಣಾವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement