ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇಶಭಕ್ತಿ ಸಾರುವ ಜಾಗೋ ಭಾರತ್ ಕಾರ್ಯಕ್ರಮ ಉದ್ಘಾಟನೆ

Vishwanath S
Updated On : 26 Aug 2013, 12:26 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 25
ಯುವಜನತೆಯಲ್ಲಿ ದೇಶಭಕ್ತಿ ಸಂದೇಶ ಸಾರುವ ಜಾಗೋ ಭಾರತ್ ವಿನೂತನ ಗೀತಗಾಯನ ಕಾರ್ಯಕ್ರಮವು ಜಗನ್ಮೋಹನ ಅರಮನೆಯಲ್ಲಿ ಭಾನುವಾರ ನಡೆಯಿತು.
ರೋಟರಿ ಮೈಸೂರು ಉತ್ತರ ಸಂಸ್ಥೆಯು ಸಮುದಾಯದ ಸೇವಾ ಕಾರ್ಯಕ್ಕಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಚಿಂತಕ ಹಾಗೂ ರಾಷ್ಟ್ರಪ್ರೇಮಿ ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸಿದರು.
ನಂತರ ಮಾತನಾಡಿ, ದೇಶಪ್ರೇಮ ಮೂಡಿಸುವ ಸಲುವಾಗಿ ಜಾಗೋ ಭಾರತ್ ಗೀತಕಥನ ಕಾರ್ಯಕ್ರಮವನ್ನು ನಾಡಿನಾದ್ಯಂತ ನಡೆಸುತ್ತಿದ್ದು, ಮೈಸೂರಿನಲ್ಲಿ 5ನೇ ಬಾರಿಗೆ ಈ ಪ್ರದರ್ಶನ ನೀಡುತ್ತಿದ್ದೇವೆ. ಇದು ತಂಡದ 360ನೇ ಪ್ರದರ್ಶನ ಎಂದರು.
ಸಂಸ್ಥೆ ಅಧ್ಯಕ್ಷ ಜಿ. ಶಿವಲಿಂಗಸ್ವಾಮಿ, ಉಪಾಧ್ಯಕ್ಷ ರಾಜಶೇಖರ ಕದಂ, ಕಾರ್ಯದರ್ಶಿ ಮಹದೇವಪ್ಪ, ರೋಟರಿಯನ್ನರಾದ ಅ. ಚ. ಅಶೋಕಕುಮಾರ್, ಜಗದೀಶ್ ಇದ್ದರು.
ನಂತರ ನಡೆದ ಗೀತ ಕಥನ ಗಾಯನದಲ್ಲಿ ಚಕ್ರವರ್ತಿ ಸೂಲಿಬೆಲೆ, ಸುರೇಶ್ ಅವಧಾನಿ, ಶ್ರುತಿ ಅವರು ದೇಶ ಭಕ್ತಿಗೀತೆಗಳನ್ನು ಹಾಡಿದರು. ಹಿಮ್ಮೇಳದಲ್ಲಿ ಅರವಿಂದ ನಾಜಿರೆ ತಬಲ, ಶಿವಕುಮಾರ್ ಹಾರ್ಮೋನಿಯಂ, ಪರಶುರಾಮ್ ಕೀ ಬೋರ್ಡ್ ಹಾಗೂ ವಿಠಲ್ ರಂಗದೊಳ್ ರಿದಂ ಪ್ಯಾಡ್ ನುಡಿಸಿ ಸಾಥ್ ನೀಡಿದರು. ಹಾಡುಗಳ ನಡುವೆ ಭಾರತದ ತ್ರಿವಣ ಧ್ವಜ ಹಿಡಿದ ಯುವಕರು ಕುಣಿದು ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement