ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮೈರಾಡ ಸಂಸ್ಥೆಯಿಂದ ಉತ್ತಮ ಕೆಲಸ'

Vishwanath S
Updated On : 26 Aug 2013, 12:28 pm

ಕ.ಪ್ರ.ವಾರ್ತೆ ,  ಹುಣಸೂರು ,  ಆ. 25
ಜನ ಮತ್ತು ಜಾನುವಾರುಗಳ ಆರೋಗ್ಯ ಕಾಪಾಡುವ ಹಿನ್ನಲೆಯಲ್ಲಿ ಮೈರಾಡ ಸಂಸ್ಥೆಯು ವಿವಿಧ ಶಿಬಿರ ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ ಎಂದು ತಾಪಂ ಸದಸ್ಯ ಗಣಪತಿ ಶ್ಲಾಘಿಸಿದರು.
ತಾಲೂಕಿನ ಹನಗೋಡಿಗೆ ಸಮೀಪದ ಅಬ್ಬೂರಿನಲ್ಲಿ ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ, ರ್ಯಾಲಿ ಇಂಡಿಯಾ ಹಾಗೂ ನೀರು ಬಳಕೆದಾರರ ಸಂಘ, ಪಶುವೈದ್ಯ ಸಂಗೋಪನಾ ಇಲಾಖೆಯ ಜಂಟಿಯಾಗಿ ಆಯೋಜಿಸಿದ್ದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಉಚಿತ ಲಸಿಕೆ ಹಾಕುವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹನಗೋಡು ಪಶು ಆಸ್ಪತ್ರೆಯ ವೈದ್ಯ ಡಾ. ದರ್ಶನ್ ಮಾತನಾಡಿ, ಜಾನುವಾರುಗಳಿಗೆ ಕಾಲುಬಾಯಿ ಜ್ವರವು ವೈರಾಣುಗಳಿಂದ ಹರಡುವ ಅಂಟು ರೋಗವಾಗಿದ್ದು, ರೈತರು ತಪ್ಪದೆ ವರ್ಷಕ್ಕೆ ಎರಡು ಬಾರಿ ಪಶುವೈದ್ಯ ಇಲಾಖೆ ಉಚಿತವಾಗಿ ಹಾಕುವ ಲಸಿಕೆಯನ್ನು ಮರೆಯದೇ ಹಾಕಿಸುವಂತೆ ಸಲಹೆ ನೀಡಿದರು.
ಚಿಗುರು ಸಂಪನ್ಮೂಲ ಕೇಂದ್ರದ ಶಂಕರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಶೋದಾ ಕುಮಾರ್, ಹಾರಂಗಿ ಎಂಜಿನಿಯರ್ ಲಕ್ಷ್ಮಿಕಾಂತ್, ಪಶು ಸಹಾಯಕರಾದ ಚಂದ್ರಪ್ಪ, ರಾಜನಾಯಕ, ತಿಮ್ಮೇಗೌಡ, ದೇವರಾಜು, ಮುಖಂಡರಾದ ಪ್ರವೀಣ್, ಕಣೇಗೌಡ ಇದ್ದರು. ಸುಮಾರು 120 ಜಾನುವಾರುಗಳು ಹಾಗೂ 160 ಕುರಿಗಳಿಗೆ ಲಸಿಕೆ ಹಾಕಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement