ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಜ್ಞಾನಿಗಳ ಸಂಘದ ವಾರ್ಷಿಕ ಚಟುವಟಿಕೆ ಉದ್ಘಾಟನೆ

Vishwanath S
Updated On : 26 Aug 2013, 12:26 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 25
ನಗರದ ಸಿಎಫ್‌ಟಿಆರ್‌ಐ ಸಭಾಂಗಣದಲ್ಲಿ ಭಾರತೀಯ ಸೂಕ್ಷ್ಮಜೀವಶಾಸ್ತ್ರ ವಿಜ್ಞಾನಿಗಳ ಸಂಘದ ಮೈಸೂರು ಶಾಖೆಯ 2013- 14ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಎನ್. ಉಪೇಂದ್ರ ನೊಂಗ್ತೊಂಬ ಶುಕ್ರವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಡಾ. ಉಪೇಂದ್ರ, ದೇಶದ ಯುವ ಸಮೂಹ ಪರಾವಲಂಬಿತನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಖಿನ್ನತೆ, ಒತ್ತಡದ ಬದುಕು ಮತ್ತು ಬದಲಾದ ಆಹಾರ ಶೈಲಿಗಳು ಮುಖ್ಯ ಕಾರಣ ಎಂದರು. ಸಿಎಫ್‌ಟಿಆರ್‌ಐ ಆಹಾರ ಸೂಕ್ಷ್ಮ ಜೀವವಿಜ್ಞಾನ ಹಿರಿಯ ವಿಜ್ಞಾನಿ ಡಾ.ಜಿ. ವೆಂಕಟೇಶ್ವರನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು ಶಾಖೆಯು ರಾಷ್ಟ್ರ ಮಟ್ಟದಲ್ಲೂ ಪ್ರಶಂಸೆ ಗಳಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ಮೈಸೂರು ಶಾಖೆಯ ಅಧ್ಯಕ್ಷೆ ಡಾ. ಸೈಯದ್ ಕೌಸರ್ ಫಾತಿಮಾ, ಉಪಾಧ್ಯಕ್ಷ ಡಾ.ಎ. ಜಗನ್ನಾಥ್, ಕಾರ್ಯದರ್ಶಿ ಡಾ.ಬಿ.ವೈ. ಸತೀಶ್‌ಕುಮಾರ್, ಜಂಟಿ ಕಾರ್ಯದರ್ಶಿ ಡಾ. ಹರ್ಷ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement