ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಒಬಿಯಿಂದ ಕೃಷಿಗೆ ಒತ್ತು

Vishwanath S
Updated On : 27 Aug 2013, 12:34 pm

ಕ.ಪ್ರ.ವಾರ್ತೆ ,  ಹುಣಸೂರು ,  ಆ. 26
ಇಂಡಿಯನ್ ಒವರ್‌ಸೀಸ್ ಬ್ಯಾಂಕ್ ರೈತರ ಅಭ್ಯುದಯಕ್ಕಾಗಿ ಸ್ಪಂದಿಸುವ ಬ್ಯಾಂಕ್ ಆಗಿದ್ದು, ರೈತರ ಹಿತದೃಷ್ಟಿಯಿಂದ ಕೃಷಿ ಕಡೆಗೆ ಹೆಚ್ಚು ಗಮನಹರಿಸುತ್ತಿದೆ ಎಂದು ಬ್ಯಾಂಕ್‌ನ ರಾಷ್ಟ್ರೀಯ ಮಹಾಪ್ರಬಂಧಕ ಸಿ. ವಂಸತ್‌ಕುಮಾರ್ ಹೇಳಿದರು.
ತಾಲೂಕಿನ ಗಾವಡಗೆರೆ ಹೋಬಳಿ ಹರವೆ ಗ್ರಾಮದಲ್ಲಿ ಕಟ್ಟೆಮಳಲವಾಡಿಯ ಇಂಡಿಯನ್ ಒವರ್‌ಸೀಸ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ರೈತ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್‌ನಿಂದ ರೈತರು ಅಭಿವೃದ್ಧಿಗಾಗಿ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ನೊಂದಿಗೆ ಸಹಕರಿಸಬೇಕು.
ಮುಂದೆ ಕೃಷಿ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಸಾಲ ನೀಡಲಿದ್ದು. ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಕಟ್ಟೆಮಳಲವಾಡಿ ಬ್ಯಾಂಕ್ ವತಿಯಿಂದ ಕೂಲಿ ಕಾರ್ಮಿಕರಿಗೆ, ಮಹಿಳಾ ಸಂಘಗಳಿಗೆ, ಕೃಷಿ ಕಾರ್ಮಿಕರಿಗೆ, ಬಡವರಿಗೆ, ಸ್ತ್ರೀ ಶಕ್ತಿ ಸಂಘಗಳಿಗೆ, ಪರಿಶಿಷ್ಟರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಮೈಸೂರು ಪ್ರಾಂತ್ಯದ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ನರಸಿಂಹನ್ ಮಾತನಾಡಿ, ಬ್ಯಾಂಕ್ ಅಧ್ಯಕ್ಷ ನರೇಂದ್ರ ಅವರ ಆಸಕ್ತಿಯಿಂದಾಗಿ ಇಷ್ಟೊಂದು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಮುಂದೆಯೂ ಮತಷ್ಟು ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಉಪಕಾರ್ಯದರ್ಶಿ ಜಿ. ಸೂರ್ಯನಾರಾಯಣ, ಪ್ರತಿಯೊಬ್ಬರು ದುಂದು ವೆಚ್ಚ ಕಡಿಮೆ ಮಾಡಿ ನಮ್ಮ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯಬೇಕೆಂದು ಹೇಳಿದರು.
ನೌಕರರ ಒಕ್ಕೂಟದ ಎನ್. ರಾಜಶೇಖರ್ ಮಾತನಾಡಿದರು. ಬೆಳಕು ಸೇವಾ ಸಂಸ್ಥೆಯ ಪರಿಶ್ರಮದಿಂದ ಕುಡಿತ ಬಿಟ್ಟ ಕಟ್ಟೆಮಳಲವಾಡಿಯ ಹನ್ನೊಂದು ಮಂದಿ ದಲಿತರಿಗೆ ತಲಾ 50 ಸಾವಿರ ಮಂಜೂರಾತಿ ಪತ್ರ, ಮಹಿಳೆಯರಿಗೆ ಸಾಲ ಮಂಜೂರಾತಿ ಪತ್ರ, ಹಾಗೂ ರೈತರಿಗೆ ಕೃಷಿ ಸಾಲ ವಿತರಿಸಲಾಯಿತು.
ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಎಂ. ನಾರಾಯಣ ನಾಯರ್, ವಾಸುದೇವನ್, ಹರವೆ ಗ್ರಾಪಂ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷೆ ಜಯಂತಿ, ಕಟ್ಟೆಮಳಲವಾಡಿ ಗ್ರಾಪಂ ಅಧ್ಯಕ್ಷ ಮಹದೇವು, ಸದಸ್ಯರಾದ ದೇವರಾಜು, ಬ್ಯಾಂಕ್ ವ್ಯವಸ್ಥಾಪಕ ಕೃಷ್ಣಪ್ಪ, ಜಿ.ಎನ್. ಸ್ವಾಮಿ, ಕೃಷಿ ಅಧಿಕಾರಿ ಎಸ್. ಗೀತಾ, ಬೆಳಕು ಸೇವಾ ಸಂಸ್ಥೆಯ ಸಂಸ್ಥೆಯ ನಿಂಗರಾಜಮಲ್ಲಾಡಿ ಮಾತನಾಡಿದರು. ವಿವಿಧ ಗ್ರಾಮಗಳ ರೈತರು, ಮಹಿಳಾ ಸಂಘದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement