ದಸರಾದಲ್ಲಿ ಕನ್ನಡ ರಾರಾಜಿಸಲಿ
ಮೈಸೂರು: ನಾಡಹಬ್ಬ ದಸರಾ ಆಚರಣೆಯಲ್ಲಿ ದೀಪಾಲಂಕಾರದ ಪ್ರಾಯೋಜಕತ್ವ ವಹಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಕನ್ನಡಕ್ಕೆ ಆದ್ಯತೆ ನೀಡುವಂತೆ ಕನ್ನಡ ಕ್ರಿಯಾ ಸಮಿತಿ ಆಗ್ರಹಿಸಿದೆ. ಪ್ರವಾಸಿಗರಿಗೆ ಇಂಗ್ಲಿಷ್ ಬಳಸಿದರೂ ಅದರ ಪ್ರತಿಯೊಂದು ಪದ, ಸಾಲು ಮೊದಲು ಕನ್ನಡದಲ್ಲಿ ದೊಡ್ಡದಾಗಿರಬೇಕು. ಕನ್ನಡದಲ್ಲಿ ಕೆಳಗೆ ಕನ್ನಡಕ್ಕಿಂತ ಚಿಕ್ಕದಾದ ಅಕ್ಷರಗಳಲ್ಲಿ ಇಂಗ್ಲಿಷ್ ಬಳಸಬೇಕು. ಈ ಸಂಬಂಧ ಆ. 27 ರಂದು ನಡೆಯುವ ಸೆಸ್ಕ್ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಲಿ ಎಂದು ಸಮಿತಿ ಅಧ್ಯಕ್ಷ ಎಂ.ಬಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸಂಸ್ಕೃತಿ ಸುಬ್ರಹ್ಮಣ್ಯ, ಖಜಾಂಚಿ ಕೊ.ಸು. ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.
ಪುನಶ್ಚೇತನ ಕಾರ್ಯಕ್ರಮ
ಮೈಸೂರು: ಕುವೆಂಪುನಗರದ ಎಜ್ಯುಕೇರ್ ಟೆಕ್ನಾಲಜಿಸ್ ವತಿಯಿಂದ ಆ. 28 ಮತ್ತು 29ರ ಬೆಳಗ್ಗೆ 10 ರಿಂದ 1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಉಚಿತವಾಗಿ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ದೂ. 4281058, ಮೊ. 9945500027 ಸಂಪರ್ಕಿಸಿರಿ.
ಸೆ.2ಕ್ಕೆ ಹೃದ್ರೋಗ ತಪಾಸಣಾ ಶಿಬಿರ
ಸುತ್ತೂರು: ನಂಜನಗೂಡು ತಾಲೂಕು ಸುತ್ತೂರು ಕ್ಷೇತ್ರದಲ್ಲಿ ಸೆ. 2 ರಿಂದ 4 ರವರೆಗೆ ವಿಶ್ವ ಹೃದಯ ರೋಗ ನಿವಾರಣೆ ಸಂಬಂಧಿಸಿದ 8ನೇ ವಾರ್ಷಿಕ ಸಮ್ಮೇಳನವು ಜೆಎಸ್‌ಎಸ್ ಆಸ್ಪತ್ರೆ ಸಹಯೋಗದೊಂದಿಗೆ ನಡೆಯಲಿದೆ. ಸೆ. 2ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಹೃದ್ರೋಗ ತಪಾಸಣಾ ಶಿಬಿರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೃದ್ರೋಗ ತಜ್ಞರಿಂದ ಆಯೋಜಿಸಿದೆ. ಮಧ್ಯಾಹ್ನ 2ಕ್ಕೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ, ಸಮಾಲೋಚನೆ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ.
ಇಂದು ಪ್ರತಿಭಟನೆ
ಮೈಸೂರು: ಮುಂಬೈನಲ್ಲಿ ಛಾಯಾಗ್ರಾಹಕ ಪತ್ರಕರ್ತೆಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಹಾಗೂ ಈ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಗಾಯತ್ರಿಪುರಂನ ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟ, ಧ್ವನಿ ಮಹಿಳಾ ಒಕ್ಕೂಟ ಹಾಗೂ ಆರ್‌ಎಲ್‌ಎಚ್‌ಪಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆ. 27ರ ಬೆಳಗ್ಗೆ 10.30ಕ್ಕೆ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಮುಂಬೈನಲ್ಲಿ ನಡೆದ ಅತ್ಯಾಚಾರ ಖಂಡಿಸಿ ತ್ಯಾಗರಾಜರಸ್ತೆಯ ಕರ್ನಾಟಕ ಜನಪರ ಶಕ್ತಿ ವೇದಿಕೆ ವತಿಯಿಂದ ಆ. 27ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರಾಜ್ಯಾಧ್ಯಕ್ಷೆ ಆರ್. ಮಧುಮತಿ ತಿಳಿಸಿದ್ದಾರೆ.