ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು

Vishwanath S
Updated On : 27 Aug 2013, 12:35 pm

ಮೈಸೂರು: ಮನೆಯ ಬಾಗಿಲು ಮುರಿದ ಕಳ್ಳರು 3 ಲಕ್ಷ ಮೌಲ್ಯದ ಬೆಳ್ಳಿ ಮತ್ತು 70 ಗ್ರಾಂ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಜೆ.ಪಿ. ನಗರದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯ ಹಿಂಭಾಗದ ಮನೆಯಲ್ಲಿಯೆ ಈ ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಜೆ.ಪಿ. ನಗರ ಬಿ ಬ್ಲಾಕ್, 7ನೇ ಕ್ರಾಸ್ ನಿವಾಸಿ ಜನಾರ್ದನ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಳೆದ ರಾತ್ರಿ ಸ್ಯಾಂಟ್ರೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಕೆಳಗಿನ ಮನೆಯ ಬಾಗಿಲು ಒಡೆದಿದ್ದಾರೆ. ಅಲ್ಲಿ ಏನೂ ಸಿಗದಿದ್ದಾಗ, ಮೇಲಿನ ಮನೆಯ ಬಾಗಿಲು ಮುರಿದು ಒಂದು ಎಲ್‌ಸಿಡಿ ಟಿವಿ, 3 ಲಕ್ಷ ಮೌಲ್ಯದ ಬೆಳ್ಳಿ ವಸ್ತು ಮತ್ತು 70 ಗ್ರಾಂ ತೂಕದ ಚಿನ್ನ ಕದ್ದು ಪರಾರಿಯಾಗಿದ್ದಾರೆ. ರಾತ್ರಿ ವೇಳೆ ಶಬ್ದ ಆಗುವುದನ್ನು ಗಮನಿಸಿದ ನೆರೆಮನೆಯವರು ಕಾರಿನಲ್ಲಿ ಬಂದಿರಬೇಕು ಎಂದು ಸುಮ್ಮನಾಗಿದ್ದಾರೆ. ಅಲ್ಲದೆ, ಕಳ್ಳತನ ನಡೆಸಿ ತೆರಳುವಾಗ ಕಾರು ಸ್ಟಾರ್ಟ್ ಆಗದೆ ತಳ್ಳಿಕೊಂಡು ಸ್ಟಾರ್ಟ್ ಮಾಡಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಕರ್ತವ್ಯದ ಮೇಲೆ ಹೊರ ಹೋಗಿದ್ದ ಜನಾರ್ದನ್ ಬೆಳಗ್ಗೆ ಮನೆಗೆ ಬಂದಾಗ ಈ ವಿಷಯ ತಿಳಿದು ಬಂದಿದೆ. ಈ ಮನೆಯ ಹಿಂಭಾಗದಲ್ಲಿಯೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಇದ್ದರೂ, ಕಳ್ಳತನ ಆಗಿರುವುದು ಯಾರೊಬ್ಬರ ಅರಿವಿಗೂ ಬಂದಿಲ್ಲ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement