ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲೋಕಾಯುಕ್ತ ಬಲೆಗೆ ರಾಜಸ್ವ ನಿರೀಕ್ಷಕ

Vishwanath S
Updated On : 27 Aug 2013, 12:35 pm

ಕ.ಪ್ರ.ವಾರ್ತೆ ,  ಮೈಸೂರು ,  ಆ. 26
ಜಮೀನಿನ ಖಾತೆ ವರ್ಗಾವಣೆ ಮತ್ತು ಪಹಣಿ ದಾಖಲೆ ನೀಡಲು ಲಂಚ ಸ್ವೀಕರಿಸಿದ ಬನ್ನೂರು ನಾಡಕಚೇರಿಯ ರಾಜಸ್ವ ನಿರೀಕ್ಷಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬನ್ನೂರು ನಾಡಕಚೇರಿಯ ರಾಜಸ್ವ ನಿರೀಕ್ಷಕ ಉಮೇಶ್ ಬಂಧಿತರು. ಅಲ್ಲದೆ, ಚಾಮನಹಳ್ಳಿ ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ ನಾಪತ್ತೆಯಾಗಿದ್ದು,  ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ಚಾಮನಹಳ್ಳಿಯಲ್ಲಿ 32 ಗುಂಟೆ ವ್ಯವಸಾಯದ ಜಮೀನನ್ನು ಮಳವಳ್ಳಿ ತಾಲೂಕು ಬಾಣಸಮುದ್ರದ ರವೀಂದ್ರಕುಮಾರ್ ಎಂಬವರು ಖರೀದಿಸಿದ್ದರು. ಬಳಿಕ ಖಾತೆ ವರ್ಗಾವಣೆ ಮಾಡಿ, ಜಮೀನಿನ ಪಹಣಿ ದಾಖಲೆ ಪತ್ರ ನೀಡಲು ಆರ್‌ಐ ಉಮೇಶ್ 2 ಸಾವಿರ ಮತ್ತು ವಿಎ ಪುಟ್ಟಸ್ವಾಮಿ 1 ಸಾವಿರ ಲಂಚ ಕೇಳಿದ್ದರು.
ರವೀಂದ್ರಕುಮಾರ್ 3 ಸಾವಿರ ನೀಡಲು ನಾಡಕಚೇರಿಗೆ ಆಗಮಿಸಿದ್ದರು. ಕಂದಾಯ ಅಧಿಕಾರಿ ಉಮೇಶ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪುಟ್ಟಸ್ವಾಮಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಎಂ. ಜಗದೀಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಕೆ.ಟಿ. ಮ್ಯಾಥ್ಯೂಸ್ ಥಾಮಸ್, ಗೋಪಾಲಕೃಷ್ಣ, ಸಿಬ್ಬಂದಿ ನಿರಂಜನ್, ನಾರಾಯಣ, ಪಾಂಡುರಂಗ, ಮಹೇಶ್, ಕೃಷ್ಣಮೂರ್ತಿ, ರಮೇಶ್, ಶಿವಶಂಕರ್, ಶಬ್ಬೀರ್ ಅಹಮದ್, ಮಹದೇವ, ಪುಟ್ಟಣ್ಣ, ನರಸೇಗೌಡ, ಪ್ರಶಾಂತ್, ಸತೀಶ್, ಆನಂದರಾವ್ ಸಿಂಧ್ಯಾ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement