95 ಲಕ್ಷ ವೆಚ್ಚದಲ್ಲಿ ಸೂಯಜ್ ಫಾರಂ ಅಭಿವೃದ್ಧಿ: ರಾಮದಾಸ್
ಮೈಸೂರು: ಸೂಯಜ್ ಫಾರಂನ್ನು 95 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ಇಲ್ಲಿನ ಸೂಯಜ್ ಫಾರಂಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಗೋಪಾಲಕರ ಸಮಸ್ಯೆಗಳನ್ನು ವಿಚಾರಿಸಿದರು.
ಬಳಿಕ ಮಾತನಾಡಿದ ಅವರು ರಾಜ್ಯ ಸರ್ಕಾರದ 100 ಕೋಟಿ ಅನುದಾನದ ಪೈಕಿ 95 ಲಕ್ಷ ವೆಚ್ಚದಲ್ಲಿ ಸೂಯಜ್ ಫಾರಂ ಅಭಿವೃದ್ಧಿಪಡಿಸಲಾಗುವುದು. ಎಕ್ಸೆಲ್ ಪ್ಲಾಂಟ್ನಿಂದ ಸಂಸ್ಕರಿಸಿ ಬಿಡಲಾದ ತ್ಯಾಜ್ಯ ನೀರನ್ನು ಬಳಸಿಕೊಂಡು ಸೂಯಜ್ ಫಾರಂನಲ್ಲಿ ಹಸುಗಳಿಗೆ ಬೇಕಾದ ಮೇವು ಬೆಳೆಯುವುದು, ಎಲೆಕ್ಟ್ರಾನಿಕ್ ತೂಕದ ಸೇತುವೆ ನಿರ್ಮಿಸುವುದು, ಗೋಪಾಲಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸುವುದು ಮತ್ತು ಪ್ರಾಥಮಿಕ ಚಿಕಿತ್ಸಾ ವಿಭಾಗ ತೆರೆಯಲು ಸಚಿವರು ಒಪ್ಪಿಗೆ ನೀಡಿದರು. ಎಕ್ಸೆಲ್ ಪ್ಲಾಂಟ್ನಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರಿನ ಪೈಕಿ ಸ್ವಲ್ಪ ನೀರನ್ನು ಚಾಮುಂಡಿ ಬೆಟ್ಟಕ್ಕೆ ನೀಡಲಾಗುತ್ತಿದೆ. ಉಳಿಕೆ ನೀರು ದಳವಾಯಿ ಕೆರೆ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಹಸುಗಳಿಗೆ ಮೇವು ಬೆಳೆಯಲು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪೂರೈಕೆ ಮಾಡಲು ಪಂಪ್ ವ್ಯವಸ್ಥೆ ಮಾಡಲು ಸಹ ಚಿಂತನೆ ನಡೆಸುವುದಾಗಿ ಭರವಸೆ ನೀಡಿದರು. ಫಾರಂ ಒಳಗೆ ಹಸುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು ಮತ್ತು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಮ.ವಿ. ರಾಮಪ್ರಸಾದ್ ಅವರು, ಸಚಿವರಲ್ಲಿ ಮನವಿ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.