ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಮೈಸೂರು: ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಫೆ.2 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ನರಸಿಂಹರಾಜ ಮೊಹಲ್ಲಾ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ. ಶಕ್ತಿ ನಗರ, ಜೆಎಸ್‌ಎಸ್ ಬಡಾವಣೆ, ಶ್ರೀನಗರ, ಕಲ್ಯಾಣಗಿರಿ ಸುತ್ತಮುತ್ತಲಿನ ಪ್ರದೇಶಗಳು.
ನೃತ್ಯೋತ್ಸವ
ಮೈಸೂರು: ಗುರುದೇವ ಲಲಿತಕಲಾ ಅಕಾಡೆಮಿಯು ಫೆ.3ರ ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ಗುರುದೇವ ನೃತ್ಯೋತ್ಸವ-2013 ಏರ್ಪಡಿಸಿದೆ. ಮಾಜಿ ಮೇಯರ್ ವಾಸು ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಅಣ್ಣೇಗೌಡ, ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಶೆಟ್ಟಿ, ಕಲಾಪೋಷಕಿ ಕೆ.ಎಂ. ವಸುಂಧರಾ ಮತ್ತು ವಿದುಷಿ ಕೃಷ್ಣವೇಣಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಾರ್ಷಿಕೋತ್ಸವ
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‌ನ 13ನೇ ವಾರ್ಷಿಕೋತ್ಸವ ಫೆ.3ರ ಬೆಳಗ್ಗೆ 10.30ಕ್ಕೆ ಶಾರದಾ ವಿಲಾಸ ಕಾಲೇಜು ಆವರಣದ ಡಾ.ಚಿನ್ನಸ್ವಾಮಿ ಸಭಾಂಗಣದಲ್ಲಿ ನಡೆಯಲಿದೆ. ಕವಯಿತ್ರಿ ಡಾ. ಲತಾ ರಾಜಶೇಖರ್ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಎಸ್. ರಾಮಪ್ರಸಾದ್ ಅಧ್ಯಕ್ಷತೆ ವಹಿಸುವರು. ನಾಡೋಜ ಡಾ.ದೇಜಗೌ ಅವರು ಅಂದಿನ ಇಂದಿನ ಪ್ರಾಣಿಗಳು ಮತ್ತು ಮಹಾಕವಿಯೊಂದಿಗೆ ಮಸಗಲಿ ಮತ್ತು ಇತರೆ ಲೇಖನಗಳು ಕೃತಿ ಬಿಡುಗಡೆ ಮಾಡುವರು. ಅಂದು ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿಯನ್ನು ಶ್ರೀ ಕುಮಾರನಿಜಗುಣ ಸ್ವಾಮಿಗಳಿಗೆ ನೀಡಲಾಗುವುದು. ಅಲ್ಲದೆ ಡಾ.ಎ.ವಿ. ನರಸಿಂಹಮೂರ್ತಿ, ಯದುಗಿರಿ ಗೋಪಾಲನ್, ರಾಧಾ ಮಲ್ಲಪ್ಪ, ಪ್ರೊ.ವಿ. ನರಹರಿ ಅವರನ್ನು ಸನ್ಮಾನಿಸಲಾಗುವುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.