ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಗರ ಪಾಲಿಕೆ ಬಜೆಟ್‌ಗೆ ಎಸಿಐಸಿಎಂ ಹಲವು ಸಲಹೆ

Parashurama
Updated On : 1 Feb 2013, 10:40 am

ಮೈಸೂರು: ಮೈಸೂರು ನಗರ ಪಾಲಿಕೆಯು ಈ ಸಾಲಿನಲ್ಲಿ ಮಂಡಿಸಲಿರುವ ಬಜೆಟ್ ಹೇಗಿರಬೇಕು ಎಂಬುದರ ಬಗ್ಗೆ ಎಸಿಐಸಿಎಂ ಸಂಘಟನೆಯು ಕೆಲವು ಸಲಹೆಗಳನ್ನು ನೀಡಿದೆ.
ಬಜೆಟ್ ಮಂಡಿಸುವ ಮೊದಲು ಕನಿಷ್ಠ ಮೂರು ಸುತ್ತು ಸಾರ್ವಜನಿಕರ ಸಮಾಲೋಚನಾ ಸಭೆ ನಡೆಸಿ ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಂತರ ಬಜೆಟ್ ಮಂಡಿಸಬೇಕು. ಇಂತಹ ಸಭೆಗಳು ಮೂರು ತಿಂಗಳ ಮುಂಚೆಯೇ ನಡೆಯಬೇಕು. ಆದರೆ ಬಹುತೇಕ ಈ ನಿಯಮವನ್ನು ನಗರ ಪಾಲಿಕೆ ಪಾಲಿಸುತ್ತಿಲ್ಲ ಎಂದು ಎಸಿಐಸಿಎಂ ಸಂಚಾಲಕ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರ ಪಾಲಿಕೆಯ ಬಜೆಟ್‌ಗೆ ಸಲಹೆ ಸೂಚನೆಗಳನ್ನು ಕ್ರೋಢೀಕರಿಸುವ ಸಲುವಾಗಿ ತಜ್ಞರು ಹಿರಿಯ ನಾಗರಿಕರು ಹಾಗೂ ನಿವೃತ್ತ ಅಧಿಕಾರಿಗಳಿಂದ ಸಲಹೆಗಳನ್ನು ಪಡೆಯಲಾಗಿದೆ ಎಂದು ಅವರು ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ ಅವರಿಗೆ ಶುಕ್ರವಾರ ವಿವರಿಸಿದರು.
ಮೈಸೂರಿನ ಸುತ್ತ ಇರುವ 46 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪಾಲಿಕೆಯ 128 ಕಿ.ಮೀ. ವ್ಯಾಪ್ತಿಯು 200 ಕಿಮೀಗೆ ವಿಸ್ತಾರವಾಗುವುದರಿಂದ ಈ ಸಾಲಿನ ಬಜೆಟ್‌ನಲ್ಲಿ ಈ ವಿಷಯವನ್ನು ಗಮನ ಹರಿಸಿ ಬಜೆಟ್ ಮಂಡಿಸಿದರೆ ಮಾತ್ರ ಸಮರ್ಪಕ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ವಿಫಲ: ವಿಶ್ವದಲ್ಲಿಯೇ 4ನೇ ಪ್ರವಾಸಿ ತಾಣವಾಗಿರುವ ಮೈಸೂರಿಗೆ ಕಳೆದ ವರ್ಷ 60 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೀಗಿರುವಾಗ ಮೈಸೂರನ್ನು ಸರಿಯಾಗಿ ಬಿಂಬಿಸುವಲ್ಲಿ ಪಾಲಿಕೆ ಹಾಗೂ ಜಿಲ್ಲಾಡಳಿತ ವಿಫಲಗೊಂಡಿದೆ. ಕಳೆದ ಸಾಲಿನಲ್ಲಿ ಘೋಷಣೆ ಮಾಡಿದ್ದ ಶೇ.20 ರಷ್ಟು ಯೋಜನೆಗಳೂ ಅನುಷ್ಠಾನವಾಗಿಲ್ಲ ಎಂದು ಟೀಕಿಸಿದ್ದಾರೆ.   ಸಮಗ್ರ ಘನತ್ಯಾಜ್ಯ ನಿರ್ವಹಣೆ, ನಗರವಾಸಿ ಬಡವರಿಗೆ ಮೂಲ ಸೌಕರ್ಯ ಮತ್ತು ವಸತಿ ಕಾರ್ಯಕ್ರಮ, 24್ಗ7 ನೀರು ಸರಬರಾಜು ಯೋಜನೆ, ಘನತ್ಯಾಜ್ಯ ವಸ್ತುಗಳಿಂದ ಅನಿಲ ಉತ್ಪಾದನೆ ಮಾಡಬೇಕು ಎಂದು ತಿಳಿಸಿದ್ದಾರೆ. ಆಸ್ತಿ ಕಂದಾಯ ವಸೂಲಿ ಜಾಸ್ತಿಯಾಗಬೇಕು. ವಾಣಿಜ್ಯ ಪರವಾನಗಿ ಶುಲ್ಕ ವೃದ್ಧಿಯಾಗಬೇಕು, ಕುಡಿಯುವ ನೀರಿನ ಕಂದಾಯ ಜಾಸ್ತಿ ಸಂಗ್ರಹಿಸಬೇಕು ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಪರಿಸರದ ಅಭಿವೃದ್ಧಿ, ಪಾರಂಪರಿಕ ಕಟ್ಟಡದ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ, ಪ್ರತ್ಯೇಕ ನೀರಿನ ಘಟಕ, ಕೆರೆಗಳ ಅಭಿವೃದ್ಧಿ ಹಾಗೂ ಕ್ರೀಡಾಂಗಣಗಳ ಜೀರ್ಣೋದ್ಧಾರ, ಸ್ತ್ರೀಶಕ್ತಿ ಭವನ ನಿರ್ಮಾಣ ಕೈಗೊಳ್ಳಬೇಕು. ಹೊಸ ಯೋಜನೆಗೆ ಹಣ ನಿಯಂತ್ರಿಸಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂಬಿತ್ಯಾದಿ ಸಲಹೆಗಳನ್ನು ಸೂಚಿಸಿದ್ದು, ಈ ಸಂಬಂಧ ಆಯುಕ್ತರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments