ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿವೇಶನಗಳ ಅಕ್ರಮ ಮಾರಾಟ: ಆರೋಪ

Parashurama
Updated On : 1 Feb 2013, 10:47 am

ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಮುತ್ತೂರು ಗ್ರಾಪಂ ವ್ಯಾಪ್ತಿಗೆ ಸೇರುವ ರಾಜೀವಗ್ರಾಮ ಹಾಡಿಯಲ್ಲಿ ಮೂಲ ಆದಿವಾಸಿ ಬುಡಕಟ್ಟಿನ ಪ.ಪಂಗಡದವರಿಂದ ಇತರೆ ಜನಾಂಗದವರು ನಿವೇಶನಗಳನ್ನು ಖರೀದಿಸುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬರುತ್ತಿವೆ. ಹಣ ಮತ್ತು ಸಾರಾಯಿ ಆಸೆ ತೋರಿಸಿ ಕಡಿಮೆ ಬೆಲೆಗೆ ಮನೆಗಳನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಜತೆಗೆ ಗ್ರಾಪಂನ ಅಧಿಕಾರಿಯೂ ಸಹ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ಏನೂ ಅರಿಯದ ಆದಿವಾಸಿಗಳಿಗೆ ತಿಳಿವಳಿಕೆ ಹೇಳದೆ ಕೇವಲ ಹಣದ ಆಸೆಗಾಗಿ ಆದಿವಾಸಿಗಳ ಮನೆ- ಮಠ ಕಸಿದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥ ರಾಜು ಆರೋಪಿಸಿದ್ದಾರೆ.
ಶಾಸಕರ ಫ್ಲೆಕ್ಸ್ ತೆರವಿಗೆ ಆಗ್ರಹ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸರಿಸಮಕ್ಕೆ ಶಾಸಕ ಕೆ.ವೆಂಕಟೇಶ್ ಅವರಿರುವ ಫ್ಲೆಕ್ಸ್ ಅನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಎಸ್ಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಎಚ್ಚರಿಸಿದ್ದಾರೆ. ಬೆಟ್ಟದಪುರ ಗ್ರಾಮದಲ್ಲಿ ಈ ಹಿಂದೆ ನಡೆದ ಸಂವಿಧಾನ ರಾಷ್ಟ್ರೀಯ ಧರ್ಮವಾಗಲಿ ಎಂಬ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸರಿಸಮಕ್ಕೆ ಶಾಸಕ ಕೆ. ವೆಂಕಟೇಶ್ ಅವರ ಚಿತ್ರವನ್ನು ಹಾಕಿಸಿಕೊಂಡಿರುವುದು ಹಾಗೂ ಕಾಂಗ್ರೆಸ್ ನಾಯಕ ಭಾವಚಿತ್ರಗಳನ್ನು ಡಾ.ಅಂಬೇಡ್ಕರ್ ಅವರ ತಲೆಯ ಮೇಲೆ ಹಾಕಿಸಿರುವುದು ಖಂಡನೀಯ ಹಾಗೂ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದ್ದರಿಂದ ಕೂಡಲೆ ಫ್ಲಕ್ಸ್ ಅನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಶಾಸಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಮೊಕದ್ದಮೆ ದಾಖಲಿಸಿ, ತಾಲೂಕಿನಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದರು. ಬಿಎಸ್ಪಿ ತಾಲೂಕು ಅಧ್ಯಕ್ಷ ದೇವರಾಜ್, ಸಂಯೋಜಕ ಈರಾಜ್‌ಬಹುಜನ್, ಮುಖಂಡರಾದ ರವಿತೇಜ್, ಕಾಂತರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments