ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನ್ಯಾಷನಲ್ ಟಿಎಸ್‌ಡಿ ರ್ಯಾಲಿಗೆ ಸಾಂಕೇತಿಕ ಚಾಲನೆ

Parashurama
Updated On : 1 Feb 2013, 10:38 am

ಮೈಸೂರು: ಜೆ.ಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿ. ವತಿಯಿಂದ ಹಮ್ಮಿಕೊಂಡಿರುವ ಜೆ.ಕೆ ಟೈರ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಟಿಎಸ್‌ಡಿ ರ್ಯಾಲಿ ಚಾಂಪಿಯನ್‌ಷಿಪ್‌ಗೆ ಶುಕ್ರವಾರ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಸಾಂಕೇತಿಕವಾಗಿ ಚಾಲನೆ ನೀಡಿದರು.
173 ಕಿ.ಮೀ.ಗಳ ರ್ಯಾಲಿಯು ಅಧಿಕೃತವಾಗಿ ಶನಿವಾರ ಬೆಳಗ್ಗೆ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಿಂದ ಆರಂಭವಾಗಲಿದೆ. ಈ ರ್ಯಾಲಿಯು ಟೈಮ್ ಸ್ಪೀಡ್ ಡಿಸ್ಟೆನ್ಸ್ (ಟಿಎಸ್‌ಡಿ) ಕೇಂದ್ರಿಕೃತವಾಗಿದ್ದು, ಲಲಿತಮಹಲ್ ಪ್ಯಾಲೇಸ್‌ನಿಂದ ಆರಂಭವಾಗಲಿದೆ. ರ್ಯಾಲಿಯಲ್ಲಿ ಒಟ್ಟು 40 ಕಾರುಗಳು ಭಾಗವಹಿಸಿದ್ದು, ಬೆಂಗಳೂರು, ಮೈಸೂರು, ಹೈದರಾಬಾದ್, ಈರೋಡ್, ಕೋಲ್ಕತಾ, ದೆಹಲಿಯಿಂದ ತಂಡಗಳು ಪಾಲ್ಗೊಂಡಿವೆ.
ಈಗಾಗಲೇ ರ್ಯಾಲಿ 5 ಸುತ್ತುಗಳು ಮುಗಿದಿದ್ದು, 6ನೇ ಹಾಗೂ ಫೈನಲ್ ಸುತ್ತು ಮೈಸೂರಿನಲ್ಲಿ ನಡೆಯುತ್ತಿದೆ. ಮೊದಲಿಗೆ ಬೆಂಗಳೂರು, ರಾಂಚಿ, ಜೈಪುರ್, ಛತ್ತೀಸ್‌ಗಢ, ನಾಗಲ್ಯಾಂಡ್‌ನಲ್ಲಿ ಸ್ಪರ್ಧೆ ನಡೆಸಲಾಯಿತು. ಈ 5 ಸುತ್ತುಗಳು ಸೇರಿದಂತೆ ಫೈನಲ್ ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ತಂಡಗಳಿಗೆ ಪ್ರಶಸ್ತಿ ವಿತರಿಸಲಾಗುವುದು. ಮೊದಲ ತಂಡ 6.5 ಲಕ್ಷ ನಗದು ಹಾಗೂ ಪಾರಿತೋಷಕವನ್ನು ತನ್ನದಾಗಿಸಿಕೊಳ್ಳಲಿದೆ ಎಂದು ರ್ಯಾಲಿಯ ಪ್ರಮೋಟರ್ ಕೆ. ಪ್ರಸಾದ್ ತಿಳಿಸಿದರು.
ಈ ಹಿಂದಿನ ಸ್ಪರ್ಧೆಯಲ್ಲಿ ಬೆಂಗಳೂರಿನ ಸತೀಶ್ ಮತ್ತು ಸವಿರಾ ಡಿಸೋಜ ದಂಪತಿ, ಕಾರ್ತಿಕ್- ಆನಂದ್, ಸಚಿನ್- ಚಂದ್ರೇಶ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನದಲ್ಲಿದ್ದಾರೆ. ಶನಿವಾರದ ಪಂದ್ಯದಲ್ಲಿ ವಿಜೇತರನ್ನು ಘೋಷಿಸಲಾಗುವುದು. ರ್ಯಾಲಿ ಸಾಗುವ ಮಾರ್ಗದಲ್ಲಿ 30 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.
ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿ. ಉಪಾಧ್ಯಕ್ಷ ಉಮೇಶ್ ಶೆಣೈ, ವ್ಯವಸ್ಥಾಪಕ ಹರಿಸಿಂಗ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments