ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಿಎಸ್‌ವೈ ಬೆನ್ನಿಗೆ ಚೂರಿ ಹಾಕಿಲ್ಲ

Parashurama
Updated On : 1 Feb 2013, 10:45 am

ನಂಜನಗೂಡು: ಬಿಜೆಪಿಗೆ ಸೇರಿ ಸಕಲ ಸವಲತ್ತುಗಳನ್ನು ಪಡೆದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರ ಬೆನ್ನಿಗೆ ಚೂರಿಹಾಕಿದ್ದು ಮಾಜಿ ಸಚಿವ ಎಂ. ಮಹದೇವ್ ಅವರೇ ಹೊರತು ನಾನಲ್ಲ ಎಂದು ಕೆಜೆಪಿ ಮುಖಂಡ ಎಸ್. ಮಹದೇವಯ್ಯ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಕೆಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಮಹದೇವ್ ಅವರು ಬಿಜೆಪಿಗೆ ಸೇರಿದ ನಂತರ ಯಡಿಯೂರಪ್ಪ ಅವರು ಪಕ್ಷದ ಟಿಕೆಟ್ ನೀಡಿದರು. ಚುನಾವಣೆ ಸೋತ ನಂತರವೂ ನಿಗಮ- ಮಂಡಳಿ ಅಧ್ಯಕ್ಷ ಪದವಿ ನೀಡಿದರು. ಇದ್ಯಾವುದನ್ನು ಸ್ಮರಿಸದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಚೂರಿ ಹಾಕಿದ್ದನ್ನು ಜನರು ಅರಿತಿದ್ದಾರೆ ಎಂದು ಜರಿದರು.
ಕಳ್ಳರ ಸುಳ್ಳರ ಪಕ್ಷವಲ್ಲ- ಕಾಪುಸಿ: ಕರ್ನಾಟಕ ಜನತಾ ಪಕ್ಷ ಕಳ್ಳರ- ಸುಳ್ಳರ ಪಕ್ಷ ಎಂದಿರುವ ಮಾಜಿ ಸಚಿವರ ಬಾಯಲ್ಲಿ ಈ ತರಹದ ಹೇಳಿಕೆಗಳು ಘನತೆ ತರುವುದಿಲ್ಲ ಎಂದು ಕಾ.ಪು. ಸಿದ್ದಲಿಂಗಸ್ವಾಮಿ ಹೇಳಿದರು. ದ್ವೇಷ, ಅಸೂಯೆಯಿಂದ ಎಂ.ಮಹದೇವ್ ಅವರು ಸಣ್ಣ ಮಾತುಗಳನ್ನಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕೆಜೆಪಿ ಕಾರ್ಯಕರ್ತರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಬಿ.ಎಸ್. ಯಡಿಯೂರಪ್ಪ ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಅವರ ಅಧಿಕಾರ ಅವಧಿಯಲ್ಲಿ ಹಿಂದುಳಿದ ವರ್ಗ, ದಲಿತರಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ ಎಂದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆಜೆಪಿಯಡಿ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಿ ಫಾರಂ ನೀಡುವಾಗ ಪಕ್ಷದ ಅಧ್ಯಕ್ಷರು ಕ್ಷೇತ್ರ ಸಮೀಕ್ಷೆ, ಸಂಘಟನೆ ಕಾರ್ಯಕರ್ತರ ಒಡನಾಟ ಅರಿತು ಆಯಾ ಕ್ಷೇತ್ರಗಳಲ್ಲಿ 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಬಹುಮತ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ಡಾ.ಡಿ.ತಿಮ್ಮಯ್ಯ ಕೆ.ವಿ. ಚಿನ್ನಯ್ಯ, ಮುಳ್ಳೂರು ಶಿವರಾಮ್, ಹೆಜ್ಜಿಗೆ ಎಚ್.ಎಸ್. ದಯಾನಂದಮೂರ್ತಿ, ಬಿ.ಎಚ್. ರಂಗನಾಥ್, ವಿನಯ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments