ಬೇರೆಯವರ ಹೆಸರಿಗೆ ಖಾತೆ: ಆರೋಪ
ಮೈಸೂರು: 20 ವರ್ಷಗಳ ಹಿಂದೆ ಎಂಜಿನಿಯರಿಂಗ್ ಕೋ ಆಪರೇಟಿವ್ ಸೊಸೈಟಿಯಿಂದ ಪಡೆದುಕೊಂಡು ಮನೆ ನಿರ್ಮಿಸಿ ವಾಸವಾಗಿದ್ದ ನಾಚನಹಳ್ಳಿ ಪಾಳ್ಯದಲ್ಲಿರುವ ಸ್ವತ್ತಿನ ಸಂಖ್ಯೆ 86 ಮತ್ತು 85ರ ಖಾಲಿ ನಿವೇಶನವನ್ನು ನಗರಪಾಲಿಕೆ ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದೆ ಎಂದು ಸ್ವತ್ತಿನ ವಾರಸುದಾರರಾದ ಗೌರಮ್ಮ ಆರೋಪಿಸಿದ್ದಾರೆ. 1990 ರಲ್ಲಿ ಕಾನೂನು ಬದ್ಧವಾಗಿ ನಿವೇಶನ ಪಡೆದು ನಿವೇಶನ ಸಂಖ್ಯೆ 86ರಲ್ಲಿ ಮನೆ ನಿರ್ಮಿಸಿದ್ದೇವೆ. ನಿವೇಶನ ಸಂಖ್ಯೆ 85 ಖಾಲಿಯಾಗಿಯೇ ಉಳಿದಿದೆ. ಪಾಲಿಕೆಯಿಂದ ನಿವೇಶನ ಸಂಖ್ಯೆ 86ಕ್ಕೆ ಸಿಆರ್ ನೀಡಿದ್ದರೂ ಸಿದ್ದಯ್ಯ ಮತ್ತು ಜಯಮ್ಮ ಎಂಬವರ ಹೆಸರಿಗೆ ಖಾತೆ ಮಾಡಿಕೊಟ್ಟಿದೆ. ಜಯಮ್ಮ ನಮಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಸಿದ್ದಯ್ಯ, ಜಯಮ್ಮ ಅವರು ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ವಿದ್ಯಾರಣ್ಯಪುರಂ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.